ತೂಕ ಇಳಿಸಿಕೊಳ್ಳಲು ಮನೆ ಮದ್ದು

ತೂಕ ಇಳಿಸಿಕೊಳ್ಳಲು ಮನೆ ಮದ್ದು

ಬೆಂಗಳೂರು, ಫೆ. 22: ಸಾಮಾನ್ಯವಾಗಿ ಕೆಲವೊಂದು ಸಾರಿ ನಾವು ತಿಂದಿರುವಂತಹ ಆಹಾರ ಜೀರ್ಣವಾಗದೆ ನಮ್ಮಲ್ಲಿ ಬೊಜ್ಜು ಶೇಖರವಾಗುತ್ತದೆ. ಶೇಖರವಾಗುರುವ ಬೊಜ್ಜುನ್ನ ನಾನು ಮನೆಯಲ್ಲಿ ಸುಗುವತಂಹ ವಸ್ತುಗಳನ್ನು ಬಳಸಿ ನಮ್ಮ ದೇಹದ ಬೊಜ್ಜನ್ನ ಕರಗಿಸಬಹುದು.

ಅರಿಶಿಣ: ಅರಿಶಿಣ ಕೇವಲ ತೂಕ ಇಳಿಕೆಗೆ ಮಾತ್ರವಲ್ಲದೇ ಅನೇಕ ರೋಗಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸೋಕೆ ಬೆಸ್ಟ್ ಮೆಡಿಸಿನ್. ಇದೇ ಅರಿಶಿಣ ಮಿಶ್ರಿತ ಹಾಲನ್ನು ಪ್ರತಿನಿತ್ಯ ಕುಡಿಯುತ್ತಾ ಹೋದರೆ ನಿಮ್ಮ ದೇಹದ ತೂಕ ಆಟೋಮ್ಯಾಟಿಕ್ ಆಗಿ ಇಳಿಯುತ್ತಂತೆ.

ಒಂದು ಲೋಟ ಹಾಲನ್ನು ಚೆನ್ನಾಗಿ ಬಿಸಿ ಮಾಡಿ, ಕುದಿಸಿದ ನಂತರ, ಒಂದು ಚಿಟಿಕೆ ಅರಿಶಿನ ಪುಡಿ ಬೆರೆಸಿ, ಕದಡಿದ್ರೇ.. ಅದೇ ಗೋಲ್ಡನ್ ಮಿಲ್ಕ್ ಆಗುತ್ತದೆ. ಈ ಹಾಲನ್ನು ಕುಡಿದ್ರೆ ಸಾಕು ನಿಮ್ಮ ದೇಹದ ತೂಕ ತಾನಾಗಿಯೇ ಇಳಿಯುತ್ತದೆಯಂತೆ.

ಅರಿಶಿಣ ಬೆರೆಸಿದ ಹಾಲು ಪ್ರಬಲ ಪೇಯವಾಗಿದೆ. ಇದರಲ್ಲಿ ಕೊಬ್ಬಿನ ಆಮಲಗಳು, ಆಂಟಿ ಆಕ್ಸಿಡೆಂಟ್ ಗಳು, ಉರಿಯೂತ ನಿವಾರಕ ಅಂಶಗಳಿವೆ. ಹೀಗೆ ಅರಿಶಿನ ಬೆರೆಸಿದ ಹಾಲನ್ನು ಕುಡಿಯುತ್ತಾ ಹೋದಂತೆ ಕೊಬ್ಬ ಕರಗಿ, ದೇಹದ ತೂಕ ಕಡಿಮೆಯಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.

 

Related