ತಲೆ ಹೊಟ್ಟಿನ ಸಮಸ್ಯೆಗೆ ಮನೆಮದ್ದು

ತಲೆ ಹೊಟ್ಟಿನ ಸಮಸ್ಯೆಗೆ ಮನೆಮದ್ದು

ಇತ್ತೀಚಿನ ಜೀವನ ಶೈಲಿಯಲ್ಲಿ ಕೆಲಸದ ಒತ್ತಡಗಳಲ್ಲಿ ನಮ್ಮ ಕೂದಲಿನ ಬಗ್ಗೆ ನಾವು ಹೆಚ್ಚು ಗಮನಹರಿಸಲಾಗುವುದಿಲ್ಲ. ಆದ್ದರಿಂದ ತಲೆಕೂದಲು ಉದುರುವುದು ಹಾಗೂ ತಲೆಹೊಟ್ಟಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಇನ್ನು ತಲೆ ಹೊಟ್ಟಿನ ಸಮಸ್ಯೆಯನ್ನು ನಾವು ಮನೆಯಲ್ಲಿ ಸಿಗುವಂತಹ ವಸ್ತುಗಳನ್ನು ಉಪಯೋಗಿಸಿಕೊಂಡು ತಲೆ ಹೊಟ್ಟನ್ನು ನಿವಾರಿಸಬಹುದು.

ಹೌದು, ತಲೆಹೊಟ್ಟಿನ ಸಮಸ್ಯೆಯನ್ನು ಬಹುತೇಕ ಮಂದಿ ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಅಸಾಧ್ಯ ತುರಿಕೆಯೂ ಉಂಟಾಗುತ್ತದೆ. ತಲೆಹೊಟ್ಟು ಉಂಟಾಗಲು ಮುಖ್ಯ ಕಾರಣವೆಂದರೆ ತಲೆಬುರುಡೆ ಒಣಗುವುದು. ಇದರ ಪರಿಹಾರಕ್ಕೆ ಮಾರುಕಟ್ಟೆಯಲ್ಲಿ ವಿವಿಧ ತೈಲಗಳು, ಹಾಗೂ ಡೆನ್ರ್ರೆಪ್ ಶ್ಯಾಂಪೂಗಳು ಸಿಗುತ್ತವೆ. ಆದರೆ, ಇದರಿಂದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗದು.

ಮೆಂತ್ಯೆ ಕಾಳನ್ನು ಎರಡರಿಂದ ಮೂರು ಚಮಚ ಮೆಂತ್ಯೆ ಕಾಳುಗಳನ್ನು ತೆಗೆದುಕೊಂಡು ಅದನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಡಿ. ಮರುದಿನ ಇದನ್ನು ರುಬ್ಬಿಕೊಂಡು ಪೇಸ್ಟ್  ಮಾಡಿ ತಲೆಗೆ ಹಚ್ಚಿಕೊಂಡು ಮರುದಿನ ಶಾಂಪೂವಿನಿಂದ ತೊಳೆದರೆ ಸಮಸ್ಯೆ ಪರಿಹಾರದ  ಜೊತೆಗೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ಲಿಂಬೆ ಮತ್ತು ತೆಂಗಿನೆಣ್ಣೆ

ಎರಡು ಚಮಚ ಉಗುರುಬೆಚ್ಚಗಿನ ತೆಂಗಿನ ಎಣ್ಣೆಗೆ ಅಷ್ಟೇ ಪ್ರಮಾಣದ ಲಿಂಬೆ ರಸವನ್ನು ಬೆರೆಸಿಕೊಂಡು ತಲೆಬುರುಡೆಗೆ ಮಸಾಜ್ ಮಾಡಿ 30 ನಿಮಿಷ ಕಾಲ ಹಾಗೇ ಬಿಟ್ಟು ಶಾಂಪೂವಿನಿಂದ ಕೂದಲು ತೊಳೆದರೆ  ತಲೆಹೊಟ್ಟನ್ನು ನಿಯಂತ್ರಿಸಬಹುದು. ತೆಂಗಿನ ಎಣ್ಣೆಯು ನೈಸರ್ಗಿಕವಾಗಿ ಆ್ಯಂಟಿಬ್ಯಾಕ್ಟೀರಿಯಾ ಗುಣವನ್ನು ಹೊಂದಿರುವ ಕಾರಣದಿಂದ ಇದು ತಲೆಬುರುಡೆಗೆ ತೇವಾಂಶ ಒದಗಿಸುವುದು. ವಾರದಲ್ಲಿ ಮೂರು ಸಲ ಒಂದು ತಿಂಗಳ ಕಾಲ ಪ್ರಯೋಗಿಸಬೇಕು.

 

Related