ತಲೆನೋವಿಗೆ ಮನೆಮದ್ದು

ತಲೆನೋವಿಗೆ ಮನೆಮದ್ದು

ತಲೆನೋವು ಸಾಮಾನ್ಯವಾಗಿ ಎಲ್ಲರಿಗೂ ಬಂದೇ ಬರುತ್ತದೆ. ಆದರೆ ಕೆಲವರಿಗೆ ಮಾತ್ರ ಪದೇಪದೇ ತಲೆನೋವು ಕಾಡುತ್ತಲೇ ಇರುತ್ತದೆ.

ಹೆಚ್ಚಾಗಿ ಮೊಬೈಲ್ ನೋಡುವುದರಿಂದ ಮತ್ತು ಹೆಚ್ಚಾಗಿ ಕಂಪ್ಯೂಟರ್, ಲ್ಯಾಪ್ಟಾಪ್ ನೋಡುವುದರಿಂದ ಪದೇಪದೇ ತಲೆನೋವು ಬರುವುದು ಸರ್ವೇಸಾಮಾನ್ಯ.

ಇನ್ನು ಈ ತಲೆನೋವನ್ನು ಹೋಗಲಾಡಿಸಲು ಸಾಮಾನ್ಯವಾಗಿ ಎಲ್ಲರೂ  ಮಾತ್ರೆ ಇನ್ನಿತರ ಔಷಧಿಗಳನ್ನು ಸೇವಿಸಿ ತಾತ್ಕಾಲಿಕವಾಗಿ ತಲೆನೋವನ್ನು ನಿವರಿಸಿಕೊಳ್ಳುತ್ತಾರೆ. ಇಂಥ ಪದೇಪದೇ ಕಾಡುವ ತಲೆ ನೋವಿಗೆ ನಮ್ಮ ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಈ ತಲೆ ನೋವನ್ನು ನಿವರಿಸಿಕೊಳ್ಳಬಹುದು.

  1. ಶುಂಠಿ ಮತ್ತು ತುಳಸಿ ರಸ : ವಿಪರಿತವಾಗಿ ತಲೆನೋವು ಕಾಡುತ್ತಿದ್ದಾರೆ ಅಂತವರು ಶುಂಠಿ ಮತ್ತು ತುಳಸಿ ರಸ ಬಳಸಬಹುದು. 10-15 ತುಳಸಿ ಎಲೆಗಳು ಮತ್ತು ಸ್ವಲ್ಪ ಶುಂಠಿಯನ್ನು ತೆಗೆದುಕೊಂಡು ಪುಡಿಮಾಡಬೇಕು. ನಂತರ ಅದರ ರಸವನ್ನು ತೆಗೆದು ಹಣೆಯ ಮೇಲೆ ಹಚ್ಚಬೇಕು. ಈ ರಸದ ಪೇಸ್ಟ್ ಅನ್ನು ಹಣೆಯ ಮೇಲೆ ಹಚ್ಚುವುದರಿಂದ ನೋವು ಬೇಗನೆ ಗುಣವಾಗುತ್ತದೆ.
  2. ಪುದೀನಾ ರಸ :

ಪುದೀನಾ ಔಷಧೀಯ ಪ್ರಯೋಜನಗಳನ್ನು ಹೊಂದಿದೆ. ತಲೆನೋವು ಕಾಣಿಸಿಕೊಂಡಾಗ ಪುದೀನ ಎಲೆಗಳ ರಸವನ್ನು ತೆಗೆದುಕೊಂಡು ಅದನ್ನು ನಿಮ್ಮ ಹಣೆಯ ಮೇಲೆ ಹಚ್ಚಬೇಕು. ಈ ರಸವನ್ನು ಹಚ್ಚುವುದರಿಂದ ತಲೆನೋವು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.

  1. ಬಾದಾಮಿ : ತಲೆನೋವಿನಿಂದ ಮುಕ್ತಿ ಪಡೆಯಲು ಬಾದಾಮಿಯನ್ನೂ ಸೇವಿಸಬಹುದು. 5-7 ಬಾದಾಮಿಯನ್ನು ಜಗಿದು ತಿಂದರೆ ತಲೆನೋವು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಬಾದಾಮಿಯಲ್ಲಿ ಕಂಡುಬರುವ “ಸೆಲೆಸಿನ್” ಅಂಶವು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ದೇಹದಲ್ಲಿನ ಯಾವುದೇ ರೀತಿಯ ನೋವನ್ನು ನಿವಾರಿಸುತ್ತದೆ.

 

 

Related