ಕಣ್ಣಿನ ಆರೈಕೆಗೆ ಮನೆ ಮದ್ದು

ಕಣ್ಣಿನ ಆರೈಕೆಗೆ ಮನೆ ಮದ್ದು

ಇತ್ತೀಚಿನ ದಿನಗಳಲ್ಲಿ ದೃಷ್ಟಿ ಹೀನತೆ ಎಂಬುದು ಸಾಮಾನ್ಯವಾಗಿದೆ. ಹಿರಿಯರು ಸೇರಿದಂತೆ ಚಿಕ್ಕ ಮಕ್ಕಳಲ್ಲಿಯೇ ದೃಷ್ಟಿ ಹೀನತೆ ಕಂಡು ಬರದು ಸಹಜವಾಗಿದೆ. ಇಂಥ ದೃಷ್ಟಿ ಹೀನತೆಯನ್ನು ತಡೆಯಲು ನಾವು ಮನೆಯಲ್ಲಿ ಸಿಗುವಂತಹ ಹಲವಾರು ವಸ್ತುಗಳನ್ನು ಉಪಯೋಗಿಸಿಕೊಂಡು ನಮ್ಮ ದೃಷ್ಟಿ ಹೀನತೆಯನ್ನು ದೂರ ಮಾಡಿಕೊಳ್ಳಬಹುದು.

೧. ಪ್ರತಿದಿನ ಊಟದ ಜೊತೆ ೧ ಈರುಳ್ಳಿ ಸೇವಿಸುತ್ತಾ ಬಂದರೆ ಕಣ್ಣುರಿ, ಕಣ್ಣು ಚುಚ್ಚುವಿಕೆ, ತಲೆನೋವು ಕಡಿಮೆ ಆಗುತ್ತದೆ. ಈರುಳ್ಳಿ ಹೆಚ್ಚುವಾಗ ಕಣ್ಣಿನಲ್ಲಿ ನೀರು ತರಿಸಿದರೂ ಕಣ್ಣಿನ ಸಮಸ್ಯೆಗೆ ಇದರಲ್ಲಿ ಒಳ್ಳೆಯ ಪರಿಹಾರವಿದೆ.

೨. ಹಸಿಕ್ಯಾರೆಟ್ ರಸ ಪ್ರತಿನಿತ್ಯ ಸೇವಿಸುತ್ತಿದ್ದರೆ, ಕಣ್ಣುಗಳ ದೃಷ್ಟಿ ಉತ್ತಮವಾಗುತ್ತದೆ. ಕಣ್ಣಿನ ನರಗಳಿಗೆ ಶಕ್ತಿ ಬರುತ್ತದೆ.

೩. ಗುಲಾಬಿ ಜಲವನ್ನು ಹತ್ತಿಯಲ್ಲಿ ನೆನೆಸಿ, ಕಣ್ಣಿನ ಮೇಲೆ ಇಟ್ಟುಕೊಂಡು 10 ನಿಮಿಷ ಮಲಗಿದರೆ ಕಣ್ಣುರಿ, ಕಣ್ಣು ಕೆಂಪಾಗುವಿಕೆ ಎಲ್ಲಾ ಕಡಿಮೆ ಆಗುತ್ತದೆ.

೪. ಹೊನೆಗೊನೆ ಸೊಪ್ಪಿನ ರಸ 4 ಭಾಗ,1 ಭಾಗ ಎಳ್ಳೆಣ್ಣೆ ಬೆರೆಸಿ ಸಣ್ಣಉರಿಯಲ್ಲಿ ಕುದಿಸಿ ಇಂಗಿಸಿ ಬರೀ ಎಣ್ಣೆ ಉಳಿದ ಮೇಲೆ ತೆಗೆದಿಟ್ಟುಕೊಳ್ಳಿ. ಅದನ್ನು ತಲೆಗೆ ಹಚ್ಚುವುದರಿಂದ ಕಣ್ಣು ಉರಿ, ಕಣ್ಣು ಕೆಂಪಾಗುವಿಕೆ ಹಾಗೂ ಕಣ್ಣಿನ ದೃಷ್ಟಿಯ ಸಮಸ್ಯೆ ಎಲ್ಲವೂ ಪರಿಹಾರವಾಗುತ್ತದೆ.

೫. ಪರಂಗಿಹಣ್ಣನ್ನು ಮೇಲಿಂದ ಮೇಲೆ ಸೇವನೆ ಮಾಡುವುದರಿಂದ ಕಣ್ಣುಗಳಿಗೆ ಒಳ್ಳೆಯ ಶಕ್ತಿ ಬರುತ್ತದೆ. ಕಣ್ಣಿನ ದೃಷ್ಟಿಯ ಸಮಸ್ಯೆ ಬರದಂತೆ ಕಾಪಾಡುತ್ತದೆ. ಪರಂಗಿಹಣ್ಣಿನಲ್ಲಿ ಜೀವಸತ್ವ ಅಧಿಕವಾಗಿರುವುದರಿಂದ ಕಣ್ಣಿನ ನರಗಳಿಗೆ ಚೈತನ್ಯ ಬರುತ್ತದೆ.

೬. ಕಣ್ಣಿನಲ್ಲಿ ಕಸ ಅಥವಾ ಸಣ್ಣಕ್ರಿಮಿಗಳು ಬಿದ್ದಾಗ ನೀರಿಗೆ ಸ್ವಲ್ಪ ಸಕ್ಕರೆ ಹಾಕಿ ಕರಗಿಸಿ 2 ಹನಿ ಹಾಕಿದರೆ ಒಳಗಿರುವ ಕಸವನ್ನು ಹೊರಬರುತ್ತದೆ.

೭. ಗುಲಾಬಿ ನೀರಲ್ಲಿ ಕಣ್ಣು ತೊಳೆಯುತ್ತಿದ್ದರೆ ಕಣ್ಣು ಚುಚ್ಚುವಿಕೆ, ಕಣ್ಣು ಕೆಂಪಾಗುವಿಕೆ ಕಡಿಮೆ ಆಗುತ್ತದೆ.

೮. ಕಣ್ಣಿನಲ್ಲಿ ಕಸ ಹೋದಾಗ ಹಸಿಈರುಳ್ಳಿಯನ್ನು ಮೂಸಿ ನೋಡಿದರೆ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿದು ಕಸ ಹೊರಗೆ ಬರುತ್ತದೆ.

೯. ಕಣ್ಣಿನಲ್ಲಿ ಗೀಜು ಬರುತ್ತಿದ್ದರೆ ಅಥವಾ ಬೆಳಿಗ್ಗೆ ಏಳುವಾಗ ಕಣ್ಣು ಮೆತ್ತಿಕೊಂಡಿದ್ದರೆ ಅದಕ್ಕೆ ಬೇವಿನ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ, ಶೋಧಿಸಿ ಆ ನೀರನ್ನು ಬಾಯಿಗೆ ಹಾಕಿ ಮುಕ್ಕಳಿಸಿದರೆ ಅದರಿಂದ ಗೀಜು ಕಟ್ಟುವುದು ನಿಲ್ಲುತ್ತದೆ.

೧೦. ಉಪ್ಪಿನ ದ್ರಾವಣದಲ್ಲಿ ಕಣ್ಣನ್ನು ಮುಳುಗಿಸಿ ಕಣ್ಣುರೆಪ್ಪೆ ಬಡಿಯುತ್ತಿದ್ದರೆ ಕಣ್ಣುಗಳ ಆಯಸ್ಸು ಹೆಚ್ಚಾಗುತ್ತದೆ.

೧೧. ಬಿಳಿಈರುಳ್ಳಿ ರಸವನ್ನು ಶುದ್ಧ ಜೇನುತುಪ್ಪದೊಡನೆ ಸೇರಿಸಿ ಕಣ್ಣಿಗೆ 2 ತೊಟ್ಟು ಹಾಕುತ್ತಾ ಬಂದರೆ ಕಣ್ಣಿನ ಪೊರೆ ಬರುವುದಿಲ್ಲ ಅಥವಾ ಈರುಳ್ಳಿ ರಸವನ್ನು ಹತ್ತಿಯ ಬತ್ತಿಯಲ್ಲಿ ಅದ್ದಿ ಕಣ್ಣಿನ ಕಪ್ಪು ತಯಾರಿಸುವಂತೆ ಮಾಡಿ ಬೆಣ್ಣೆಯಲ್ಲಿ ಕಲಸಿ ಪ್ರತಿನಿತ್ಯ ಕಾಡಿಗೆ ಇಡುತ್ತಾ ಬಂದರೆ ಮುಂದೆ ಕಣ್ಣಿನ ಪೊರೆ ಬರುವುದಿಲ್ಲ.

೧೨. ದಾಳಿಂಬೆ ಚಿಗುರೆಲೆ ಹಾಗೂ ಸೀಬೆಹಣ್ಣಿನ ಹೂ ಎರಡನ್ನೂ ಹಿಸುಕಿ ರಸ ತೆಗೆದು ಕಣ್ಣಿಗೆ ಹಾಕುವುದರಿಂದ ಅನುಕೂಲವಾಗುತ್ತದೆ.

Related