ಬಾಯಿಯ ಸಮಸ್ಯೆಗೆ ಮನೆಮದ್ದು

ಬಾಯಿಯ ಸಮಸ್ಯೆಗೆ ಮನೆಮದ್ದು

ನಮ್ಮ ದೇಹದಲ್ಲಿರುವಂತಹ ಪ್ರತಿಯೊಂದು ಅಂಗಾಂಗಗಳಿಗೂ ಅದರದೇ ಆದ ಬೆಲೆ ಇದೆ. ಯಾವುದೇ ಒಂದು ಅಂಗಕ್ಕೂ ತೊಂದರೆ ಆದರೂ ಸಹ ದೇಹ ಅದನ್ನು ಸಹಿಸುವುದಿಲ್ಲ. ಆದ್ದರಿಂದ ನಮ್ಮ ದೇಹದಲ್ಲಿ ಇರುವಂತಹ ಪ್ರತಿಯೊಂದು ಅಂಗವನ್ನುಅತ್ಯಂತ ಆರೋಗ್ಯಕರವಾಗಿ ನೋಡಿಕೊಳ್ಳಬೇಕಾಗುತ್ತದೆ.

ಅದರಲ್ಲೂ ಸಹ ನಮ್ಮ ದೇಹದಲ್ಲಿ ಅತ್ಯಂತ ಮುಖ್ಯವಾಗಿರುವಂತಹ ಅಂಶವೆಂದರೆ ಅದು ಬಾಯಿ. ಬಾಯಿಯನ್ನು ನಾವು ಅತ್ಯಂತ ಶುಚಿ ಮತ್ತು ಆರೋಗ್ಯಕರವಾಗಿ ಕಾಪಾಡುವುದರಿಂದ ನಮ್ಮ ಆರೋಗ್ಯ ಸಹ ಸಮೃದ್ಧಿಯಾಗಿರುತ್ತದೆ.

ಇನ್ನು ಬಾಯಿಗೆ ಸಂಬಂಧ ಪಟ್ಟಂತೆ ಇರುವ ಯಾವುದೇ ಸಮಸ್ಯೆಗಳನ್ನು ಉಪ್ಪಿನ ನೀರಿನಿಂದ ಬಾಯಿ ಮುಕ್ಕಳಿಸುವ ತಂತ್ರಗಾರಿಕೆ ಪರಿಹಾರ ಮಾಡುತ್ತದೆ. ನೀವು ಒಂದು ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ 1 ಟೀ ಚಮಚ ಪುಡಿ ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ ದಿನದಲ್ಲಿ ಹಲವು ಬಾರಿ ಬಾಯಿ ಮುಕ್ಕಳಿಸಿ ಉಗಿಯುವುದರಿಂದ ನಿಮ್ಮ ಸಮಸ್ಯೆ ಪರಿಹಾರವಾಗಲಿದೆ.

ನಿಮ್ಮ ಬಾಯಿಯ ಪಿಹೆಚ್ ಮಟ್ಟವನ್ನು ನಿಯಂತ್ರಣ ಮಾಡಿ ನಿಮ್ಮ ಉರಿಯೂತ ಸಮಸ್ಯೆಯನ್ನು ಇದು ನಿವಾರಣೆ ಮಾಡುತ್ತದೆ. ಅಲರ್ಜಿ ಮತ್ತು ಇನ್ನಿತರ ಸಮಸ್ಯೆಗಳಿಂದ ಉಂಟಾಗಿರುವ ವಸಡುಗಳ ತೊಂದರೆಯನ್ನು ಇದು ನಿವಾರಣೆ ಮಾಡುತ್ತದೆ.

ನಿಮ್ಮ ಹಲ್ಲುಗಳಿಗೆ ಮತ್ತು ವಸಡುಗಳಿಗೆ ಸಂಬಂಧ ಪಟ್ಟಂತೆ ಲವಂಗದ ಎಣ್ಣೆಯನ್ನು ಬಳಕೆ ಮಾಡಬಹುದು. ಬಹಳ ಹಿಂದಿನ ಕಾಲದಿಂದ ಆಯುರ್ವೇದ ಪಂಡಿತರು ಸಹ ಲವಂಗದ ಎಣ್ಣೆಯನ್ನು ಬಳಕೆ ಮಾಡುತ್ತಾ ಬಂದಿದ್ದಾರೆ. ಲವಂಗದ ಎಣ್ಣೆಯಲ್ಲಿ ಆಂಟಿ ಮೈಕ್ರೊಬೇಲ್ ಗುಣ ಲಕ್ಷಣ ಇರುವುದರಿಂದ ಹಲ್ಲು ನೋವು ಮತ್ತು ವಸಡುಗಳ ಊತ ಬಹಳ ಬೇಗನೆ ನಿವಾರಣೆಯಾಗುತ್ತದೆ.

ಒಂದು ವೇಳೆ ನಿಮ್ಮ ವಸಡುಗಳು ಈಗಾಗಲೇ ಊದಿಕೊಂಡು ಸಾಕಷ್ಟು ನೋವು ಕೊಡುತ್ತಿದ್ದರೆ, ಲವಂಗದ ಎಣ್ಣೆಗೆ ಸ್ವಲ್ಪ ಕಾಳು ಮೆಣಸಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಊದಿಕೊಂಡ ವಸಡುಗಳ ಮೇಲ್ಭಾಗದಲ್ಲಿ ಅನ್ವಯಿಸಿ ದಿನದಲ್ಲಿ ಹಲವು ಬಾರಿ ಈ ರೀತಿ ಮಾಡುವುದರಿಂದ ಬಹಳ ಬೇಗನೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವುದು.

ಕೇವಲ ಲವಂಗಗಳನ್ನು ಬಾಯಿಯಲ್ಲಿ ಒತ್ತರಿಸಿಕೊಂಡು ಅದರ ನೀರನ್ನು ಕುಡಿಯಬಹುದು. ಆದರೆ ಅತಿಯಾದ ಲವಂಗ ಸೇವನೆ ಬೇಡ. ಇದು ನಿಮ್ಮ ಗಂಟಲನ್ನು ಮತ್ತು ಹೊಟ್ಟೆಯ ಕಿರಿಕಿರಿ ಸಮಸ್ಯೆಯನ್ನು ಹೆಚ್ಚು ಮಾಡಬಹುದು.

ಅನಾದಿಕಾಲದಿಂದ ಶುಂಠಿ ನಮ್ಮ ಆಯುರ್ವೇದ ಪಂಡಿತರು ತಯಾರು ಮಾಡುವ ಮನೆ ಮದ್ದುಗಳಲ್ಲಿ ಬಳಕೆಯಾಗುತ್ತಾ ಬಂದಿದೆ. ಶುಂಠಿಯಲ್ಲಿ ಆಂಟಿ – ಆಕ್ಸಿಡೆಂಟ್ ಮತ್ತು ಗುಣ – ಲಕ್ಷಣಗಳು ಹೆಚ್ಚಾಗಿರುವುದರಿಂದ ಹಲ್ಲುಗಳ ವಸಡಿನ ಭಾಗದಲ್ಲಿ ಮತ್ತು ಹಲ್ಲುಗಳ ಬೇರುಗಳಲ್ಲಿ ಕಂಡು ಬರುವ ಬ್ಯಾಕ್ಟೀರಿಯಾಗಳನ್ನು ಇದು ತೆಗೆದು ಹಾಕುತ್ತದೆ.

ಅರ್ಧ ಇಂಚು ಶುಂಠಿಯನ್ನು ಸ್ವಲ್ಪ ಜಜ್ಜಿ ಅದಕ್ಕೆ ಅರ್ಧ ಟೀ ಚಮಚ ಉಪ್ಪು ಹಾಕಿ ಬೆರೆಸಿ ನಯವಾದ ಪೇಸ್ಟ್ ತಯಾರು ಮಾಡಿಕೊಂಡು ಹಲ್ಲು ಹಾಗೂ ವಸಡುಗಳ ಮೇಲೆ ಅನ್ವಯಿಸಿ.ಸುಮಾರು ಹತ್ತು ನಿಮಿಷಗಳ ನಂತರ ನಿಮ್ಮ ಬಾಯಿಯನ್ನು ತೊಳೆದುಕೊಳ್ಳಿ.

Related