ಎಲ್ಲೆಲ್ಲೂ ಹೋಳಿ ಸಂಭ್ರಮ

ಎಲ್ಲೆಲ್ಲೂ ಹೋಳಿ ಸಂಭ್ರಮ

ಬೆಂಗಳೂರು: ಇಂದು ದೇಶದಾದ್ಯಂತ ಎಲ್ಲೆಡೆ ಬಹಳ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹೋಳಿ ಹಬ್ಬ ಬಂತಂದರೆ ಸಾಕು ಚಿಕ್ಕ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ.

ಈ ಹೋಳಿ ಹಬ್ಬವನ್ನು ಹಿಂದು ಸಂಪ್ರದಾಯದಲ್ಲಿ ಪ್ರತಿ ವರ್ಷವೂ ಕಾಮನನ್ನು ಸುಡುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಇನ್ನು ಹಳ್ಳಿಗಳಲ್ಲಿ ಹೋಳಿ ಹಬ್ಬ ಬಂತಂದ್ರೆ ಸಾಕು, ಹೋಳಿ ಹಬ್ಬದ ದಿನದಂದು ಕಾಮನನ್ನು ಸುಟ್ಟಿರುವ ಬೆಂಕಿಯಿಂದಲೇ ತಮ್ಮ ಮನೆಯಲ್ಲಿ ಒಲೆ ಉರಿಸುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.

ಇನ್ನು ಹೋಳಿ, ಬಣ್ಣಗಳ ಹಬ್ಬವು ಅನೇಕ ಕಥೆಗಳೊಂದಿಗೆ ಸಂಬಂಧ ಹೊಂದಿದೆ. ಅದರ ಹಿಂದೆ ಒಂದು ದೊಡ್ಡ ಇತಿಹಾಸವಿದೆ. ಹೋಳಿಯು ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಇದು ಮುಖ್ಯವಾಗಿ ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಸೂಚಿಸುತ್ತದೆ. ಇದು ಪ್ರೀತಿ ಮತ್ತು ಬಣ್ಣಗಳ ಹಬ್ಬವೂ ಹೌದು.

ಈ ಹಬ್ಬವನ್ನು ಭಾರತದಲ್ಲಿ ವಸಂತ ಋತುವಿನಲ್ಲಿ ಆಚರಿಸಲಾಗುತ್ತದೆ. ಇದು ಸುಗ್ಗಿಯ ಕಾಲವೂ ಹೌದು. ಗ್ರೆಗೋರಿಯನ್ ಕ್ಯಾಲೆಂಡರ್​ನ ಮಾರ್ಚ್ ತಿಂಗಳಲ್ಲಿ ಬರುವ ಹಿಂದೂ ಕ್ಯಾಲೆಂಡರ್ ಪ್ರಕಾರ ಪೂರ್ಣಿಮೆಯ (ಹುಣ್ಣಿಮೆಯ ದಿನ) ದಿನ ಸಂಜೆ ಇದನ್ನು ಆಚರಿಸಲಾಗುತ್ತದೆ. ಪುರಾತನ ಭಾರತೀಯ ಪುರಾಣ ಮತ್ತು ಸಂಸ್ಕೃತಿಯು ಅದರ ಅಡಿಪಾಯವಾಗಿ ಕಾರ್ಯ ನಿರ್ವಹಿಸುತ್ತದೆ.

 

Related