ಹಿಂದೂ-ಮುಸ್ಲಿಂರು ಸಹೋದರರಂತೆ ಬದುಕುತ್ತಿದ್ದೇವೆ: ಸತೀಶ್ ರೆಡ್ಡಿ

ಹಿಂದೂ-ಮುಸ್ಲಿಂರು ಸಹೋದರರಂತೆ ಬದುಕುತ್ತಿದ್ದೇವೆ: ಸತೀಶ್ ರೆಡ್ಡಿ

ಬೊಮ್ಮನಹಳ್ಳಿ: ಕೆಟ್ಟವರಿಗೂ ಒಳ್ಳೆಯದನ್ನೇ ಬಯಸೋಣ. ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡಿದರೇ, ಭಗವಂತ ಹರಸುತ್ತಾರೆಂದು ಶಾಸಕ ಎಂ. ಸತೀಶ್ ರೆಡ್ಡಿ ನುಡಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿನ ಬಂಡೆಪಾಳ್ಯದ ಈದ್ಗಾ ಮೈದಾನದಲ್ಲಿ ಆಯೇಷ ಮತ್ತು ಮದ್ರಸ-ಎ-ಸಿರಥುಲ್ ಮುಸ್ಥಕೀಂ ಟ್ರಸ್ಟ್ ವತಿಯಿಂದ ಪವಿತ್ರ  ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ವೇಳೆ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.

ಮುಸ್ಲಿಮರ ಪವಿತ್ರ ಮಾಸ ರಂಜಾನ್ ಶುಕ್ರವಾರ ಮುಗಿದಿದ್ದು, ಶನಿವಾರ ಶವ್ವಲ್ ಮೊದಲನೇ ದಿನದಂದು ಈದ್ – ಉಲ್ – ಫಿತರ್ (ರಂಜಾನ್) ಹಬ್ಬ ಆಚರಿಸಲು ನಾವೆಲ್ಲಾ ಸೇರಿದ್ದೇವೆ. ರಂಜಾನ್  ಸಂಪ್ರದಾಯದಂತೆ  ಉಪವಾಸ (ರೋಜಾ) ಮಾತ್ರವಲ್ಲದೇ ದಾನ (ಝಕಾತ್) ನಮಾಜ್, ಕುರಾನ್ ಪಠನ, ತರಾವೀಹ್ ಮಾಡುವ ಮೂಲಕ ದೇವರನ್ನು ( ಅಲ್ಲಾಹ್ ನನ್ನು) ಸ್ಮರಿಸೋಣವೆಂದು ಶಾಸಕರು ತಿಳಿಸಿದರು.

ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಹಿಂದೂ-ಮುಸ್ಲಿಂರು ಸಹೋದರರಂತೆ ಬದುಕುತ್ತಿದ್ದೇವೆ. ರಾಜಕೀಯ ಮೀರಿಯೂ ನಮ್ಮಲ್ಲಿ ಭ್ರಾತೃತ್ವದ ಭಾವವಿದೆ. ನನ್ನ ರಾಜಕೀಯ ಜೀವನದಲ್ಲಿ ಸುಮಾರು ೨೦ ವರ್ಷಗಳಿಂದ ಮುಸ್ಲಿಂ ಬಾಂಧವರು ಕೈ ಹಿಡಿದು ನಡೆಸಿಕೊಂಡು ಬಂದಿದ್ದೀರಿ. ಈ ಭಾರಿ ಬಿಜೆಪಿಗೆ ಮತ ನೀಡಿ ಅಭಿವೃದ್ದಿಗೆ ಇನ್ನಷ್ಟು ಪುಷ್ಠಿ ನೀಡಿ ಎಂದು ಮನವಿ ಮಾಡಿದರು.

ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಏಕಕಾಲಕ್ಕೆ ಒಂದೆಡೆ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ವೃದ್ಧರು, ಮಕ್ಕಳು, ರಾಜಕೀಯ ಮುಖಂಡುರಗಳು ಸಹ ಭಾಗವಹಿಸಿದ್ದರು. ಧರ್ಮ ಗುರುಗಳು ಹಬ್ಬದ ಸಂದೇಶ ಸಾರಿ, ದಾನ – ಧರ್ಮದ ಮಹತ್ವ ಕುರಿತು ಭೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಸೈಯದ್ ಸಲಾಂ ರವರು, ಮುಸ್ಲಿಂ ಮುಖಂಡರು ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು .

Related