ಬೆಟ್ಟದ ಅರಸಮ್ಮನವರ ಜಾತ್ರೆ

  • In State
  • March 11, 2020
  • 447 Views
ಬೆಟ್ಟದ ಅರಸಮ್ಮನವರ ಜಾತ್ರೆ

ಮಂಡ್ಯ, ಮಾ.11: ಬಸವನ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಬೆಟ್ಟದ ಅರಸಮ್ಮನ ಜಾತ್ರಾ ಮಹೋತ್ಸವವು ಅಪಾರ ಜನಸ್ತೋಮದೊಂದಿಗೆ ಸಡಗರ, ಸಂಭ್ರಮದಿಂದ ನಡೆಯಿತು.
ಮದ್ದೂರು ತಾಲೂಕಿನ ಹಲಗೂರು ಹೋಬಳಿಯ ಗುಂಡಾಪುರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಜಾತ್ರಾ ಮಹೋತ್ಸವದ ಅಂಗವಾಗಿ ಬೆಟ್ಟದರಸಮ್ಮನ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವರಗುಡ್ಡರು ಹೆಬ್ಬಾರೆಯನ್ನು ಬಾರಿಸುತ್ತಾ ಮುನ್ನಡೆದರು. ಅಲ್ಲದೆ ಕರಗಕ್ಕೆ ಚಾಮರಗಳನ್ನು ಬೀಸುತ್ತಾ ಛತ್ರಿ ಚಾಮರಗಳನ್ನು ಹಿಡಿದುಕೊಂಡು ಜೋಡಿ ಬಸವನ ಜೊತೆ ಮೆರವಣಿಗೆಯಲ್ಲಿ ಬೆಟ್ಟದರಸಮ್ಮನ ಸನ್ನಿದಿಗೆ ಕರಗವನ್ನು ಕೊಂಡೊಯ್ಯಲಾಯಿತು.
ಇದೇ ವೇಳೆ ಹರಕೆ ಹೊತ್ತ ಸಾವಿರಾರು ಭಕ್ತರು ಬಾಯಿಬೀಗ ಹಾಕಿಸಿಕೊಂಡರು. ಕಳಸ ಹೊತ್ತ ಮಹಿಳೆಯರು ಮುನ್ನಡೆದರು.

Related