ರಾಜ್ಯಕ್ಕೂ ಕಾಲಿಟ್ಟ ಹೈಸ್ಪೀಡ್ ವೈರಸ್

ರಾಜ್ಯಕ್ಕೂ ಕಾಲಿಟ್ಟ ಹೈಸ್ಪೀಡ್ ವೈರಸ್

ಬೆಂಗಳೂರು : ರಾಜ್ಯದಲ್ಲಿ ಆಂಭದಲ್ಲಿ ಸೋಂಕು ದೃಢಪಟ್ಟಿದ್ದ ನಾಲ್ವರು ಬ್ರಿಟನ್ ಪ್ರವಾಸಿಗರಿಗೆ ಮಾತ್ರ ವಂಶವಾಹಿ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಮೂವರಿಗೆ ರೂಪಾಂತರಿ ಕೊರೋನಾ ವೈರಸ್ ದೃಢಪಟ್ಟಿದ್ದರೆ, ಮತ್ತೊಬ್ಬರಿಗೆ ಮಾತ್ರ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

ಚೀನಾದಿಂದ ದೇಶಕ್ಕೆ ಒಕ್ಕರಿಸಿದ್ದ ಕೊರೋನಾ ಆರ್ಭಟ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ನಿಟ್ಟಿಸಿರು ಬಿಡುತ್ತಿರುವ ಈ ಹಂತದಲ್ಲಿಯೇ ಬ್ರಿಟನ್ ರೂಪಾಂತರಿ ಕೊರೋನಾ ಎಲ್ಲೆಡೆ ಆತಂಕ ಸೃಷ್ಟಿಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿರುವ ಮಾಹಿತಿಯಲ್ಲಿ ದೇಶದಲ್ಲಿ 6 ಮಂದಿಯಲ್ಲಿ ಹೊಸ ವೈರಾಣು ಪತ್ತೆಯಾಗಿದ್ದು, ಇದರಲ್ಲಿ ಮೂವರು ರಾಜ್ಯ ರಾಜಧಾನಿ ಬೆಂಗಳೂರಿನವರೇ ಆಗಿದ್ದಾರೆಂದು ತಿಳಿದುಬಂದಿದೆ.

ವಸಂತಪುರದ  ತಾಯಿ ಮತ್ತು ಮಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್’ಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಇನ್ನು ಮತ್ತೊಬ್ಬ ಸೋಂಕಿತ ವ್ಯಕ್ತಿಗೆ ಅಪೋಲೋ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಭಾರತಕ್ಕೆ ವಾಪಸಾದ ವೇಳೆ ನಡೆಸಲಾದ ಕೊರೋನಾ ಪರೀಕ್ಷೆವೇಳೆ ಈ ಮೂವರಿಗೂ ಕೊರೋನಾ ದೃಢಪಟ್ಟಿತ್ತು. ನಂತರ ಅವರಿಗೆ ರೂಪಾಂತರಿ ವೈರಾಣು ಪತ್ತೆಗೆ ನಿಮ್ಹಾನ್ಸ್ ನಲ್ಲಿ ವಂಶವಾಹಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದ ಬಳಿಕ ಮಂಗಳವಾರ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 6 ಮಂದಿಯಲ್ಲಿ ರೂಪಾಂತರಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ.

ಇನ್ನು ಜೆಪಿನಗರದ ಮತ್ತೊಬ್ಬ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ಆತನ ಕುಟುಂಬದ ಪತ್ನಿ, ಮಗ ಸೇರಿ ಒಟ್ಟು 9 ಮಂದಿಯನ್ನು ಮನೆಯಲ್ಲಿಯೇ ಕ್ವಾರಂಟೈನ್’ಗೆ ಒಳಪಡಿಸಲಾಗಿದೆ. 60 ವರ್ಷ ಮೇಲ್ಪಟ್ಟ ಹಾಗೂ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವ ಸಂಪರ್ಕಿತರನ್ನು ಹೈರಿಸ್ಕ್ ಎಂದು ಪರಿಗಣಿಸಿ ಅವರನ್ನು ಆಸ್ಪತ್ರೆಯಲ್ಲಿಟ್ಟು ನಿಗಾವಹಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ತಿಳಿಸಿದರು.

ಬಿಬಿಎಂಪಿ ಆರೋಗ್ಯಾಧಿಕಾರಿಗಳು ಪ್ರತೀನಿತ್ಯ ಇರವ ಆರೋಗ್ಯವನ್ನು ತಪಾಸಣೆ ನಡೆಸಲಿದ್ದಾರೆ. ಅಪಾರ್ಟ್’ಮೆಂಟ್’ನಲ್ಲಿ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

Related