ಹೈಕೋರ್ಟ್ ಆದೇಶ ಮೀರಿದ ಬೆಂಬಲಿಗರು

ಹೈಕೋರ್ಟ್ ಆದೇಶ ಮೀರಿದ ಬೆಂಬಲಿಗರು

ಬೆಂಗಳೂರು, ಫೆ. 27 : ಯಾವುದೇ ಕಾರಣಕ್ಕೂ ಬ್ಯಾನರ್ ಬಳಸುವಂತಿಲ್ಲ ಎಂದು ಸಂಪೂರ್ಣವಾಗಿ ಬ್ಯಾನರ್ ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಆದರೆ ಇದಾವುದನ್ನೂ ಲೆಕ್ಕಿಸದ ಸಿಎಂ ಬೆಂಬಲಿಗರು ಫ್ಲೆಕ್ಸ್ ಮತ್ತು ಬ್ಯಾನರ್ ಹಾಕಿ ಬಿಎಸ್ವೈಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಸಿಎಂ ಯಡಿಯೂರಪ್ಪನವರ 78ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು, ಬೆಂಬಲಿಗರು ಸಂಭ್ರಮದಿಂದ ಆಚರಿಸುತ್ತಿದ್ದು, ಶುಭಾಶಯ ತಿಳಿಸುತ್ತಿದ್ದಾರೆ. ಇದರ ಜೊತೆಗೆ ಕಾವೇರಿ ನಿವಾಸ ಮುಂಭಾಗ ಪ್ಲೆಕ್ಸ್ ಮತ್ತು ಬ್ಯಾನರ್ ಗಳು ರಾರಾಜಿಸುತ್ತಿವೆ. ರೂಲ್ಸ್ ಫಾಲೋ ಮಾಡಿ ಎಂದು ಹೇಳಬೇಕಾದವರಿಂದಲೇ ರೂಲ್ಸ್ ಬ್ರೇಕ್ ಮಾಡಲಾಗಿದೆ.

Related