ಈ ಜಿಲ್ಲೆಯಾದ್ಯಂತ ಹೈ ಅಲರ್ಟ್

  • In State
  • April 4, 2020
  • 433 Views
ಈ ಜಿಲ್ಲೆಯಾದ್ಯಂತ ಹೈ ಅಲರ್ಟ್

ಬಾಗಲಕೋಟೆ,ಏ. 04: ದೇಶಾದ್ಯಂತ ಕೊರೋನಾ ಸೋಂಕಿನಿಂದ ಹಲವಾರು ಜನರು ಬಳಲುತಿದ್ದಾರೆ.  ರಾಜ್ಯದಲ್ಲು ಸಹ ಈ ವೈರಸ್ ನಿಂದ ಜನ ತುತ್ತಾಗುತ್ತಿದ್ದಾರೆ.

ಹೌದು,  ಕೊರೋನ ವೈರಸ್ ನಿಂದ ಬಾಗಲಕೋಟೆಯಲ್ಲಿ ವೃದ್ಧ ಮೃತಪಟ್ಟ ಹಿನ್ನೆಲೆ, ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹಳೇ ಬಾಗಲಕೋಟೆ ನಗರದಾದ್ಯಂತ ಆರೋಗ್ಯ ಇಲಾಖೆ ಸರ್ವೇ ಕಾರ್ಯ ನಡೆಸಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಒಂದೇ ದಿನದಲ್ಲಿ 6300 ಜನರ ಸರ್ವೇ ಮಾಡಿದ್ದಾರೆ.

50 ತಂಡಗಳ ಮೂಲಕ ನಗರದಾದ್ಯಂತ ಸರ್ವೇ ಕಾರ್ಯ ನಡೆಸಿದ್ದಾರೆ. ಸರ್ವೇ ಕಾರ್ಯದಲ್ಲಿ ಅನಾರೋಗ್ಯ ಪೀಡಿತ 9 ಜನರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. 9 ಜನರ ಪೈಕಿ 3 ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಸದಸ್ಯರನ್ನು 50 ತಂಡಗಳ ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ.

ಇಂದು ಮತ್ತೆ 7 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಮೃತ ಸೋಂಕಿತ ವೃದ್ಧನ ಸಂಪರ್ಕದಲ್ಲಿ ಇದ್ದ 3 ಜನ ಸೇರಿದಂತೆ ಇಂದು ಒಟ್ಟು 7 ಜನರ ಮಾದರಿಯನ್ನು ಆರೋಗ್ಯ ಇಲಾಖೆ ಪರೀಕ್ಷೆಗೆ ಕಳುಹಿಸಿದೆ.

ಮೃತ ವೃದ್ಧನ ಸಂಪರ್ಕದಲ್ಲಿದ್ದ 9 ಜನ ವೈದ್ಯರನ್ನು ಆಸ್ಪತ್ರೆಯ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಬಾಗಲಕೋಟೆ ಜಿಲ್ಲೆಯಿಂದ ಇಲ್ಲಿಯವರೆಗೆ ಕಳಿಸಿರುವ ಸ್ಯಾಂಪಲ್ ಗಳ ಸಂಖ್ಯೆ- 28. ಅವುಗಳಲ್ಲಿ ನೆಗಟಿವ್ ರಿಪೋರ್ಟ್ ಬಂದವರ ಸಂಖ್ಯೆ-17. ಪಾಸಿಟಿವ್ ರಿಪೋರ್ಟ್ ಬಂದವರ ಸಂಖ್ಯೆ-01. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ-01. ರಿಸಲ್ಟ್ ಗಾಗಿ ಕಾಯುತ್ತಿರುವವರ ಸಂಖ್ಯೆ-09. ಸ್ಯಾಂಪಲ್ ರಿಜೆಕ್ಟ್ ಆಗಿದ್ದ ಸಂಖ್ಯೆ-01 ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Related