ದಾಸವಾಳದಲ್ಲಿದೆ ವಿವಿಧ ಔಷಧೀಯ ಗುಣ!

ದಾಸವಾಳದಲ್ಲಿದೆ ವಿವಿಧ ಔಷಧೀಯ ಗುಣ!

ದಾಸವಾಳ ಹೂ ಸಾಮಾನ್ಯವಾಗಿ ಎಲ್ಲರ ಮನೆಯಂಗಳದಲ್ಲಿ ಬೆಳೆಯುವಂತ ಹೂವಾಗಿದೆ. ದಾಸವಾಳ ಹೂವಿನಲ್ಲಿ ನಮಗೆ ಬೇಕಾಗಿರುವಂತಹ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಸಾಮಾನ್ಯವಾಗಿ ದಾಸವಾಳ ಹೂವನ್ನು ನಾವು ನಮ್ಮ ಕೂದಲಿನ ಸಮಸ್ಯೆಗೆ ಬಳಸುತ್ತೇವೆ, ಮತ್ತು ನಮ್ಮ ಚರ್ಮದ ಸಮಸ್ಯೆಗೆ ಬಳಸಿ, ಸಮಸ್ಯೆಗಳನ್ನು ದೂರ ಮಾಡಿಕೊಳ್ಳುತ್ತೇವೆ.

ಹೌದು, ದಾಸವಾಳ ಹೂ ಮತ್ತು ಎಲೆ, ಬೇರು, ಕಾಂಡಗಳಲ್ಲೂ ಕೂಡ ಹಲವಾರು ಔಷಧಿ ಗುಣಗಳಿದ್ದು, ಇದು ನಮ್ಮ ಕೂದಲು ಮತ್ತು ಚರ್ಮಕ್ಕೆ ಅತ್ಯಂತ ಉಪಯುಕ್ತ ಔಷಧಿಯಾಗಿದೆ ಎಂದು ವೈದ್ಯರು ತಿಳಿಸುತ್ತಾರೆ.

ಯೆಸ್…ಸೌಂಧರ್ಯಕ್ಕೂ, ಆರೋಗ್ಯಕ್ಕೂ ಕೂದಲು ಸಂರಕ್ಷಣೆಗೂ ಅತ್ಯಂತ ಸಹಕಾರಿ‌ ಯಾಗಿದೆ ಈ. ದಾಸವಾಳ ಹೂ. ಆಹಾರದಲ್ಲಿ, ಕೂದಲು ಡೈ ಮಾಡುವುದಕ್ಕೆ, ಕೇಶ ಸಂರಕ್ಷಣೆಗೆ, ಹೆಣ್ಣುಮಕ್ಕಳ ಋತುಚಕ್ರದ ಸಮಸ್ಯೆಗಳಿಗೆ, ಹೀಗೆ ನಾನಾ ರೂಪದಲ್ಲಿ ಬಳಸಲಾಗುತ್ತದೆ.

ಕೂದಲು ಸಂರಕ್ಷಣೆ: ದಾಸವಾಳದ ಗಿಡದ ಎಲೆಯನ್ನು ತಂದು ನುಣ್ಣಗೆ ರುಬ್ಬಿಕೊಳ್ಳಿ ಆ ಕಲ್ಕವನ್ನು ತಲೆಯ ಬುಡದ ಭಾಗಕ್ಕೆ ಚೆನ್ನಾಗಿ ಹಚ್ಚಿ, ಅರ್ಧ ಗಂಟೆಯ ನಂತರ ತಲೆಯನ್ನು ಸ್ವಚ್ಛ ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ.

ಚರ್ಮದ ಸಂರಕ್ಷಣೆ: ದಾಸವಾಳದಿಂದ ಎಣ್ಣೆಯನ್ನು ತೆಗೆಯುತ್ತಾರೆ. ಈ ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ, ಗುಳ್ಳೆಗಳು, ಕಲೆಗಳು ಹೋಗುತ್ತವೆ. ಜೊತೆಗೆ ಮುಖದ ಕಾಂತಿಯನ್ನು ಉತ್ತiಗೊಳಿಸುತ್ತದೆ.

ಅನಿಯಮಿತ ಋತುಚಕ್ರ: ಪ್ರತಿ ತಿಂಗಳು ಋತುಚಕ್ರ ಸರಿಯಾಗಿ ಆಗದಿರುವ ಹೆಣ್ಣುಮಕ್ಕಳು ದಾಸವಾಳದ 3-4 ಹೂಗಳನ್ನು ಪ್ರತಿದಿನ ನುಣ್ಣಗೆ ಅರೆದು, ಬೆಳಿಗ್ಗೆ ಬರೀ ಹೊಟ್ಟೆಯಲ್ಲಿ ಸೇವಿಸಬೇಕು. 7 ದಿನಗಳ ಕಾಲ ಸತತವಾಗಿ ಸೇವಿಸಿದ್ದೇ ಆದರೆ ಋತುಚಕ್ರ ಸರಿಯಾಗಿ ಆಗಲು ಸಹಾಯಕ.

ಉರಿಮೂತ್ರ: ದಾಸವಾಳದ ಹೂವಿನ ರಸಕ್ಕೆ ಕೆಂಪು ಕಲ್ಲುಸಕ್ಕರೆ ಬೆರಸಿ 7 ದಿನಗಳ ಕಾಲ ಸತತವಾಗಿ ಸೇವಿಸುವುದರಿಂದ ಉರಿಮೂತ್ರ ಶಮನವಾಗುತ್ತದೆ.

ಆಯಾಸಕ್ಕೆ ಪರಿಹಾರ: ದಾಸವಾಳ ಹೂವಿನ ಪಾನೀಯ ಮಾಡಿ ಸೇವಿಸುವುದರಿಂದ ಆಯಾಸ, ಬಳಲಿಕೆ ಕಡಿಮೆ ಆಗುತ್ತದೆ. ಹೀಗೆ ದಾಸವಾಳದಲ್ಲಿ ಹಲವಾರು ರೀತಿಯ ಔಷಧಿ ಗುಣಗಳಿದ್ದು ನಮ್ಮ ಆರೋಗ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗವಾಗುತ್ತದೆ.

 

Related