ಮಳೆ: ಅಂತರ್ಜಲ ವೃದ್ಧಿ ಜೊತೆಗೆ ಕೃಷಿಗೆ ಪೂರಕ

ಮಳೆ: ಅಂತರ್ಜಲ ವೃದ್ಧಿ ಜೊತೆಗೆ ಕೃಷಿಗೆ ಪೂರಕ

ಗೌರಿಬಿದನೂರು: ಈ ಬಾರಿ ಬಿದ್ದ ಮಳೆಯಿಂದ ಹಾಗೂ ನರೇಗಾ ಕಾಮಗಾರಿ ಹಾಗೂ ಚೆಕ್ ಡ್ಯಾಂ ಅಭಿವೃದ್ಧಿ ಇನ್ನಿತರ ಕೃಷಿ ಕಾಮಗಾರಿಗಳಿಂದ ತಾಲ್ಲೂಕಿನ ಬಹುತೇಕ ನದಿಗಳು ತುಂಬಿ ರೈತನ ಮೊಗದಲ್ಲಿ ಹರ್ಷ ತುಂಬಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಒಂದು ವಾರದಿಂದ ಬಿದ್ದ ಮಳೆಯಿಂದ ಕೃಷಿ ಚಟುವಟಿಕೆ ಹಾಗೂ ಅಂತರ್ಜಲ ವೃದ್ಧಿಗೆ ಸಹಕಾರ ಆಗಿದ್ದು ಜೊತೆಗೆ ತಾಲ್ಲೂಕಿನ ಮುಖ್ಯ ನದಿಗಳಾದ ಬಾದ ಮರಳೂರು, ಚಿಕ್ಕಕುರೂಗೋಡು, ದೊಡ್ಡಕುರುಗೋಡು, ಮರಳೂರು, ಗೌಡಸಂದ್ರ, ಬೈಚಾಪುರ ಇನ್ನಿತರೆ ಕೆರೆಗಳು ತುಂಬಿ ಹರಿದಿರುವುದು ನಿಜಕ್ಕೂ ರೈತರಿಗೆ ವರದಾನವಾಗಿದೆ. ಬೋರ್ ವೆಲ್ ಗಳಲ್ಲಿ ನೀರು ಬಂದು ಕುಡಿಯುವ ನೀರಿಗೆ ಮತ್ತು ಕೃಷಿಗೆ ಅನುಕೂಲವಾಗಲಿದೆ.

ಸವಲತ್ತು ನೀಡಲು ಅಧಿಕಾರಿಗಳು ಕಟ್ಟಿ ಬದ್ಧರಾಗಿಬೇಕು

ಅಧಿಕಾರಿಗಳು ಕೃಷಿ ಸಂಬಂಧ ಪಟ್ಟ ಚಟುವಟಿಕೆಗಳಿಗೆ ರೈತರಿಗೆ ಸಹಕಾರ ನೀಡಬೇಕು. ಬಿತ್ತನೆ ಬೀಜ ಸಕಾಲಕ್ಕೆ ಒದಗಿಸುವ ಕಾರ್ಯಕ್ಕೆ ಮುಂದಾಗಬೇಕು. ಒಟ್ಟಾರೆ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದೆ ಅವರ ಮನೆ ಬಾಗಿಲಗೆ ಸರ್ಕಾರದ ಸವಲತ್ತು ಒದಗಿಸುವ ಕಾರ್ಯವನ್ನು ಅಧಿಕಾರಿಗಳು ಬದ್ಧತೆಯಿಂದ ಮಾಡಬೇಕು.

ಈ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದು ರೈತರಿಗೆ ಬೇಕಾದ ಬಿತ್ತನೆ ಬೀಜ ಸಕಾಲಕ್ಕೆ ಒದಗಿಸುವ ಕೆಲಸ ಮಾಡಬೇಕು. ತಾಲ್ಲೂಕಿನ ಮುಖ್ಯ ಬೆಳೆಗಳಾದ ಮುಸುಕಿನ ಜೋಳ, ರಾಗಿ, ತೊಗರಿ, ನೆಲಗಡಲೆ, ಬಿತ್ತನೆ ಬೀಜ ರಿಯಾಯತಿ ದರದಲ್ಲಿ ನೀಡಿ ರೈತರ ಆರ್ಥಿಕ ಪರಿಸ್ಥಿತಿ ಸರಿದೂಗಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅರುಂಧತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ಎಚ್.ಎನ್.ಪ್ರಕಾಶರೆಡ್ಡಿ, ಕಾರ್ಯದರ್ಶಿ ವೆಂಕಟ್ ಮುಂತಾದವರು ಹಾಜರಿದ್ದರು.

Related