ಹಾಗಲಕಾಯಿ ಹಲವು ರೋಗಗಳಿಗೆ ರಾಮಬಾಣ

ಹಾಗಲಕಾಯಿ ಹಲವು ರೋಗಗಳಿಗೆ ರಾಮಬಾಣ

ಹಾಗಲಕಾಯಿ ಯಾರಿಗೆ ಗೊತ್ತಿಲ್ಲ ಹೇಳಿ, ಎಲ್ಲರಿಗೂ ಗೊತ್ತು ಆದರೆ ಹಾಗಲಕಾಯಿಯನ್ನು ನಿಯಮತವಾಗಿ ನಮ್ಮ ಅಡುಗೆಯಲ್ಲಿ  ಬಳಸುವುದರಿಂದ ಇದು ಹಲವು ರೋಗಗಳಿಗೆ ರಾಮಬಾಣವಾಗಿದೆ ಎಂದು ಗೊತ್ತಿಲ್ಲ.

ಹೌದು, ಹಾಗಲಕಾಯಿ ಎಲ್ಲಾ ರೋಗಗಳಿಗೂ ಮದ್ದು. ಹಾಗಲಕಾಯಿಯನ್ನು ಆಗಾಗ ಅಡುಗೆಯಲ್ಲಿ ಗೊಜ್ಜು, ಪಲ್ಯ, ಇತ್ಯಾದಿ ರೂಪದಲ್ಲಿಉಪಯೋಗಿಸುತ್ತಾರೆ.

ಇದರಲ್ಲಿ ತೇವಾಂಶ, ಸಸಾರಜನಕ, ಪಿಷ್ಠ, ಕ್ಯಾಲ್ಸಿಯಂ, ಕಬ್ಬಿಣ, ಖನಿಜಾಂಶ, ನಾರಿನಾಂಶ, ಕಾರ್ಬೋಹೈಡ್ರೈಡ್, ಮ್ಯಾಂಗನೀಸ್, ಸೋಡಿಯಂ, ಕಾಪರ್, ಗಂಧಕ ಹಾಗೂ ಎ, ಬಿ, ಬಿ2, ಸಿ, ಜೀವಸತ್ವಗಳು ಹೇರಳವಾಗಿ ಇವೆ.

ಹಾಗಲಕಾಯಿ ರುಚಿಯಲ್ಲಿ ಕಹಿಯಾದರೂ ಶರೀರದ ಒಳಗೆ ಸೇರಿದ ಮೇಲೆ ಸಾಕಷ್ಟು ಸಹಾಯವಾಗುತ್ತದೆ. ಇದರಲ್ಲಿ ಜ್ವರ, ಪಿತ್ತ, ಕಫ, ಕೆಮ್ಮು, ದಮ್ಮು, ಉದರ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಕಣ್ಣುಗಳಿಗೆ ತಂಪನ್ನುಂಟು ಮಾಡುತ್ತದೆ. ಅತಿಸಾರ, ಕಫ, ಮೂಲವ್ಯಾಧಿ ಹಾಗೂ ಕ್ರಿಮಿರೋಗಗಳಿಗೆ ಒಳ್ಳೆಯ ಲಾಭಕರವಾದದ್ದು.

 

Related