ಅಂಜೂರ ಹಣ್ಣಿನಲ್ಲಡಗಿದೆ ಆರೋಗ್ಯ

ಅಂಜೂರ ಹಣ್ಣಿನಲ್ಲಡಗಿದೆ ಆರೋಗ್ಯ

ಸಾಮಾನ್ಯವಾಗಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯದ ಸಮಾನತೆಯನ್ನು ನೋಡಿಕೊಳ್ಳಲು ಪ್ರತಿನಿತ್ಯ ಒಂದಲ್ಲ ಒಂದು ಡ್ರೈ ಫ್ರೂಟ್ಸ್ ಗಳನ್ನು ಸೇವಿಸುತ್ತೇವೆ.

ಡ್ರೈ ಫ್ರೂಟ್ಸ್ ಅಂದ ತಕ್ಷಣ ನಮಗೆ ನೆನಪಿಗೆ ಬರುವುದು ಗೋಡಂಬಿ ದ್ರಾಕ್ಷಿ, ಖರ್ಜೂರದಂತಹ ಡ್ರೈ ಫ್ರೂಟ್ಸ್ ಗಳು ನಾವೆಲ್ಲೋ ಹೆಚ್ಚಾಗಿ ಸೇವಿಸುತ್ತೇವೆ. ಆದರೆ ಅಂಜೂರ ಹಣ್ಣನ್ನು ನಾವು ಪ್ರತಿನಿತ್ಯ ಕ್ರಮೇಣವಾಗಿ ಸೇವಿಸಿದರೆಯಿಂದ ನಮ್ಮ ಆರೋಗ್ಯದಲ್ಲಿ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆಯಬಹುದು.

ಹಸಿ ಅಂಜೂರ ಮಾತ್ರವಲ್ಲದೆ ಒಣಗಿದ ಅಂಜೂರವನ್ನು ಸೇವಿಸುವುದರಿಂದಲೂ ಸಹ ನಮ್ಮ ಆರೋಗ್ಯದ ಸುಧಾರಣೆಯನ್ನು ಕಂಡುಕೊಳ್ಳಬಹುದು.

ಈ ಹಣ್ಣುಗಳು ತಿಳಿಹಸಿರು ಮಿಶ್ರಿತ ಕೆಂಪು ಬಣ್ಣ ಹೊಂದಿದ್ದು ಬಹಳ ಸಿಹಿಯಾಗಿರುತ್ತದೆ. ಇದರಲ್ಲಿರುವ ಸಕ್ಕರೆ ಅಂಶವು ತಾಜಾ ಹಣ್ಣಿನಲ್ಲಿ ಶೇಕಡಾ 15 ಇದ್ದರೆ, ಒಣಗಿಸಿದ ಹಣ್ಣುಗಳಲ್ಲಿ ಶೇ. 50 ರಷ್ಟಿರುತ್ತದೆ. ಒಣಗಿದ ಅಂಜೂರವನ್ನು ಶೇಖರಿಸಿ ಸರದಂತೆ ಪೋಣಿಸಿ ಮಾರಾಟ ಮಾಡುವುದನ್ನು ನಾವೆಲ್ಲ ನೋಡಿರುತ್ತೀವಿ. ಆಮ್ಲದ ಅಂಶ ಅತಿ ಕಡಿಮೆ ಇರುವುದರಿಂದ ಇದು ಬಹಳ ಸಿಹಿಯಾಗಿರುತ್ತದೆ. ಸಿಹಿಯಲ್ಲಿ ಖರ್ಜೂರದ ನಂತರದ ಸ್ಥಾನ ಅಂಜೂರದ ಹಣ್ಣಿಗೆ ಇದೆ.

ಕಫ ನಿವಾರಣೆಗೆ: ಕೆಮ್ಮು, ದಮ್ಮು ಇರುವವರು ಇದನ್ನು ಕೆಲವು ದಿನ ಪ್ರತಿನಿತ್ಯ ಸೇವಿಸಿವುದರಿಂದ ಕಫ ಹೊರಗೆ ಬರಲು ಸಹಾಯವಾಗುತ್ತದೆ. ಹಾಲಿನಲ್ಲಿ ನೆನೆಸಿ ಸೇವಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ. ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅಂತಹವರು ಆಗ್ಗಿಂದಾಗ್ಗೆ ಈ ಹಣ್ಣನ್ನು ಸೇವಿಸುವುದರಿಂದ ಅನುಕೂಲವಾಗುತ್ತದೆ. ಮೂಲವ್ಯಾಧಿಯಿಂದ ಬಳಲುವವರು ರಾತ್ರಿ 3-4 ಅಂಜೂರದ ಹಣ್ಣನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಬರೀ ಹೊಟ್ಟೆಯಲ್ಲಿ ತಿಂದು ಹಾಲು ಕುಡಿದರೆ ಮೂಲವ್ಯಾಧಿ ಗುಣವಾಗುತ್ತದೆ.

ಈ ಹಣ್ಣಿನಲ್ಲಿ ನಾರಿನಾಂಶ ಅಧಿಕವಾಗಿರುವುದರಿಂದ ಮಲಬದ್ಧತೆ ನಿವಾರಣೆ ಯಾಗುತ್ತದೆ. ಮಾಸಿಕ ಒತ್ತಡದಂತಹ ಸಮಸ್ಯೆಗೆ ಈ ಹಣ್ಣು ಶರೀರದಲ್ಲಿ ಚೈತನ್ಯವನ್ನು ಉಂಟು ಮಾಡುತ್ತದೆ. ಒತ್ತಡ ಕಡಿಮೆ ಮಾಡಿ ನರನಾಡಿಗಳಲ್ಲಿ ಚೈತನ್ಯ ತುಂಬುತ್ತದೆ. ರಕ್ತವೃದ್ಧಿ ರಕ್ತಹೀನತೆ ಇರುವವರು ಪ್ರತಿನಿತ್ಯ 2-3 ಹಣ್ಣುಗಳನ್ನು ಸೇವನೆ ಮಾಡುವುದರಿಂದ ರಕ್ತ ವೃದ್ಧಿಯಾಗುತ್ತದೆ.

 

Related