ಕರಿಬೇವಿನ ಎಲೆಗಳಲ್ಲಡಗಿದೆ ಆರೋಗ್ಯ!

ಕರಿಬೇವಿನ ಎಲೆಗಳಲ್ಲಡಗಿದೆ ಆರೋಗ್ಯ!

ಕರಿಬೇವು ಎಂದ ತಕ್ಷಣ ನಮಗೆ ನೆನಪಾಗುವುದು ಅಡುಗೆ ಮಾತ್ರ. ನಾವು ಹೆಚ್ಚಾಗಿ ಅಡುಗೆ ಮನೆಯಲ್ಲಿ ಬಳಸುವುದೆಂದರೆ ಅದು ಕರಿಬೇವಿನ ಸೊಪ್ಪು. ಪ್ರತಿ ಅಡುಗೆಗೂ ಕರಿಬೇವಿನ ಒಗ್ಗರಣೆ ಇಲ್ಲವೆಂದರೆ ಅಡುಗೆ ಪರಿಪೂರ್ಣವಾಗುವುದಿಲ್ಲವೆಂದು ನಾವು ಭಾವಿಸುತ್ತೇವೆ.

ಕರಿಬೇವು ನಮ್ಮ ಆರೋಗ್ಯ ಕಾಪಾಡುವುದರ ಜೊತೆಗೆ, ಕೂದಲಿನ ಆರೋಗ್ಯ ಚರ್ಮದ ಆರೋಗ್ಯ ಇನ್ನಿತರ ಆರೋಗ್ಯ ಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕರಿಬೇವನ್ನು ನಾವು ಕ್ರಮೇಣವಾಗಿ ನಮ್ಮ ಆಹಾರದಲ್ಲಿ ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಇನ್ನು ದೈನಂದಿನ ಭಕ್ಷ್ಯಗಳಲ್ಲಿ ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಹೃದಯ ಕಾಯಿಲೆಯಿಂದ ಹಿಡಿದು, ಡೆಂಗ್ಯೂ, ಅಜೀರ್ಣವನ್ನು ತೆಗೆದು ಹಾಕಲು ಮತ್ತು ಚಯಾಪಚಯ ದರವನ್ನು ಸಕ್ರಿಯಗೊಳಿಸಲು ಕರಿಬೇಕು ಬಹಳ ಸಹಕಾರಿ ಆಗಿದೆ.

ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಅಲ್ಲದೇ ಇದು ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಕರಿಬೇವಿನ ಎಲೆಗಳನ್ನು ನಿಯಮಿತವಾಗಿ ತಿನ್ನುವುದರಿಂದ ಹೃದ್ರೋಗವನ್ನು ತಡೆಯಬಹುದು.

ಕರಿಬೇವು ಕೂದಲು ಉದುರುವಿಕೆಯನ್ನು ನಿವಾರಿಸುತ್ತದೆ. ಇದು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ವಿಟಮಿನ್ ಎ ಮತ್ತು ಸಿ ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲನ್ನು ಆರೋಗ್ಯವಾಗಿಡುತ್ತದೆ. ಅಷ್ಟೇ ಅಲ್ಲ, ಕರಿಬೇವಿನ ಎಲೆಗಳು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ಜಗಿಯುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ಮಲಬದ್ಧತೆ, ಆಮ್ಲೀಯತೆ, ಹೊಟ್ಟೆಯ ಸಮಸ್ಯೆ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ.

 

Related