ಚಿತ್ರಕ್ಕಾಗಿ ದೇಹದ ಮೈಕಟ್ಟೇ ಬದಲು!

ಚಿತ್ರಕ್ಕಾಗಿ ದೇಹದ ಮೈಕಟ್ಟೇ ಬದಲು!

ಮುಂಬೈ : ಸಿನಿಮಾ ಸಲುವಾಗಿ ಬೇರೆ ಬೇರೆ ಅವತಾರದಲ್ಲಿ ಬಾಲಿವುಡ್‌ನ ನಟ ಜಾನ್ ಅಬ್ರಹಂ, ಕಾಣಿಸಿಕೊಳ್ಳುತ್ತಾರೆ.

ಇಡೀ ದೇಹವನ್ನೇ ಹುರಿಗೊಳಿಸಿಕೊಂಡು, ಪಾತ್ರಕ್ಕೆ ತಕ್ಕಂತೆ ಬದಲಾಗುತ್ತಾರೆ. ಅವರ ಬಹುತೇಕ ಸಿನಿಮಾಗಳನ್ನು ನೋಡಿದರೆ ಅಲ್ಲಿ ಅವರ ಅತ್ಯಾಕರ್ಷಕ ಬಾಡಿಯೇ ಹೈಲೈಟ್. ಇದೀಗ ಆ ಪ್ರಕ್ರಿಯೆ ಸತ್ಯಮೇವ ಜಯತೇ 2 ಚಿತ್ರದಲ್ಲೂ ಮುಂದುವರಿದಿದೆ.

2018ರಲ್ಲಿ ಸತ್ಯ ಮೇವ ಜಯತೇ ಸಿನಿಮಾ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿತ್ತು. ಇದೀಗ ಅದೇ ಚಿತ್ರದ ಮುಂದುವರಿದ ಭಾಗ ಸತ್ಯಮೇವ ಜಯತೇ 2 ಚಿತ್ರದ ಮೊದಲ ಪೋಸ್ಟರ್ ಅನ್ನು ನಟ ಜಾನ್ ಅಬ್ರಹಂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಬಿಡುಗಡೆ ದಿನಾಂಕವನ್ನೂ ಘೋಷಿಸಿಕೊಂಡಿದ್ದಾರೆ.

ಮೊದಲ ಭಾಗವನ್ನು ನಿರ್ದೇಶನ ಮಾಡಿದ್ದ ಮಿಲಾಪ್ ಮಿಲನ್ ಜವೇರಿ ಎರಡನೇ ಭಾಗಕ್ಕೂ ಆಕ್ಷನ್ ಕಟ್ ಹೇಳಲಿದ್ದು, 2021ರ ಮೇ 12ಕ್ಕೆ ಈದ್ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆಯಾಗಲಿದೆ.

Related