ಪಿಎಸ್ಐ ನೇಮಕಾತಿ ಅಕ್ರಮ ದೊಡ್ಡ ಮಟ್ಟದಲ್ಲಿ ಸದ್ದು: ಎಚ್.ಡಿ.ಕುಮಾರಸ್ವಾಮಿ

ಪಿಎಸ್ಐ: ರಾಜ್ಯ ರಾಜಕಾರಣದಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರಕರಣ ಸಂಬಂಧ ಹಲವರ ಬಂಧನವಾಗಿದೆ. ಆದ್ರೆ ಬಂಧನಕ್ಕೂಳಗಾದವರು ಮಧ್ಯವರ್ತಿಗಳು, ಅದರಲ್ಲಿರುವ ಪ್ರಮುಖರು ಹೊರಗೆ ಇದ್ದಾರೆ ಎಂದು ಕಾಂಗ್ರೇಸ್ ಆರೋಪಿಸಿದೆ. ಈ ನಡೆವೆ ಸಚಿವ ಅಶ್ವಥ್ ನಾರಾಯಣ್ ರವರ ಹೆಸರು ಸಹ ಅಕ್ರಮ ನೇಮಕಾತಿಯಲ್ಲಿ ತಳುಕು ಹಾಕಿಕೊಂಡಿದೆ. ಇಂದು ಮಾಧ್ಯಮಗಳ ಜೊತೆ ಪಿಎಸ್ಐ ಅಕ್ರಮ ನೇಮಕಾತಿ ಕುರಿತು ಮಾಜಿ ಹೆಚ್.ಡಿ.ಕುಮಾರಸ್ವಾಮಿ ಮಾಡನಾಡಿದ್ದಾರೆ.  ಸರ್ಕಾರ ಎಲ್ಲಾದಕ್ಕೂ ಮೌನವಾಗಿದೆ. ಮೌನಂ ಸಮ್ಮಿತಿ ಲಕ್ಷಣಂ ಅನ್ನುವ ಅಂತಿದೆ. ಮೌನದಿಂದ ಎಲ್ಲದಕ್ಕೂ ಸಮ್ಮಿತಿ ಅನ್ನೋ ಹಾಗಿದೆ ಎಂದು ಆರೋಪಿಸಿದರು. 

ಅಶ್ವಥ್ ನಾರಾಯಣ್ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ. ದಾಖಲೆ ಇಟ್ಟು ಮಾತನಾಡಿ  ಎಂದು ಹೇಳಿದ್ದೇನೆ. ಸರ್ಟಿಫಿಕೇಟ್  ಕೊಡಿಸೋದರಲ್ಲಿ ಅಶ್ವಥ್ ನಾರಾಯಣ್ ಏನು ಅನ್ನೋದು ಗೊತ್ತಿರಬೇಕಲ್ಲವಾ? ಪರೀಕ್ಷೆ ಬರೆಯದ ನರ್ಸ್ ಗಳಿಗೆ ಸರ್ಟಿಫಿಕೇಟ್ ಕೊಟ್ಟಿದ್ದರು. ಅದನ್ನಾದ್ರೂ ಮಾತನಾಬೇಕಲ್ಲ? ದಾಖಲೆ ಇಟ್ಟು ಮಾತನಾಡಬೇಕು ಎಂದು ಕಾಂಗ್ರೇಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

 

Related