ಹಟ್ಟಿ ಕೊಲೆ ಪ್ರಕರಣ: 3 ಪಾತಕಿಗಳ ಬಂಧನ

ಹಟ್ಟಿ ಕೊಲೆ ಪ್ರಕರಣ:  3 ಪಾತಕಿಗಳ ಬಂಧನ

ಹಟ್ಟಿಚಿನ್ನದಗಣಿ: ಹಾಡುಹಗಲೆ ವ್ಯಕ್ತಿಯೋರ್ವನ ಕೊಲೆಗೈದು ಪರಾರಿಯಾದ ಆರೋಪಿಗಳನ್ನು 10 ಗಂಟೆಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳಾದ ಮೌಲಿಪಾಷ ತಂ ಟೈಲರ್ ಪಾಷ, ಮುಸ್ತಾಫ್ ಅಲಿಯಾಸ್ ಸೋನ ತಂ ಟೈಲರ್ ಪಾಷ, ಸೈಯದ್ ಅಸ್ಲಂ ತಂ ಸೈಯದ್ ಮಹಿಬೂಬ್ ಹಟ್ಟಿ ಕ್ಯಾಂಪ್ ಎಂಬುವವರನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ ಕೊಲೆಗೆ ಬಳಸಲಾಗಿದ್ದ ಚಾಕು ಹಾಗೂ ಇತರ ಆಯ್ದುಗಳನ್ನು ವಶಪಡಿಸಿಕೊಂಡಿದ್ದಾರೆ.
ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಹಟ್ಟಿ-ರಾಯಚೂರು ಮುಖ್ಯ ರಸ್ತೆಯ ಹೊಸ ಬಸ್ ನಿಲ್ದಾಣದ ದ್ವಾರದ ಮುಂದೆ ಮೃತ್ಯುಜಾನ ಬೈಕ್ಗೆ ಅಡ್ಡಗಟ್ಟಿ ನಿಲ್ಲಿಸಿದ ಹಟ್ಟಿಪಟ್ಟಣದ ಇರ್ವರು ಸಹೋದರರು ಕಣ್ಣಿಗೆ ಖಾರದಪುಡಿ ಎರಚಿ ಚಾಕು, ಮಚ್ಚಿನಿಂದ ಅಮಾನವೀಯವಾಗಿ ಇರಿದು, ಕೊಲೆಗೈದ ಆರೋಪಿಗಳು ಪರಾರಿಯಾಗಿದ್ದರು.
ಈ ಘಟನೆ ಹಿನ್ನಲೆಯಲ್ಲಿ ಕೊಲೆಯಾದ ಸಹೋದರ ತಾಜುದ್ದೀನ್ ಅನ್ಸಾರಿ ತಂ ಶಾಲಂ ಅನ್ಸಾರಿ ನೀಡಿದ ದೂರಿನ ಮೇರೆಗೆ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಇವರ ಮಾರ್ಗದರ್ಶನದಲ್ಲಿ ಎಸ್ಎಸ್ ಹುಲ್ಲೂರು ಡಿವೈಎಸ್ಪಿ ಲಿಂಗಸುಗೂರು ಇವರ ನೇತೃತ್ವದಲ್ಲಿ ಸಿಪಿಐ ಮಹಾಂತೇಶ ಸಜ್ಜನ್ ಇವರ ನೇತೃತ್ವದ ತಂಡ ರಚನೆ ಮಾಡಿ ಫೇಸ್ ಬುಕ್ ಅಕೌಂಟ್ ಮಾಹಿತಿಯಿಂದ ಕಲಬುರ್ಗಿ ನಗರದಲ್ಲಿ ಪತ್ತೆ ಹಚ್ಚಿ ಆರೋಪಿತರನ್ನು ಬಂಧಿಸಿ ದ್ವಿಚಕ್ರವಾಹನ ಹಾಗೂ ಚಾಕುವನ್ನು ವಶಪಡಿಕೊಳ್ಳಲಾಗಿದೆ.

ಹಟ್ಟಿ ಪೊಲೀಸ್ ಠಾಣೆಯ ಎಎಸ್ಐ ಲಿಂಗನಗೌಡ, ಮೌಲಾಸಾಬ್, ಸಿಬ್ಬಂದಿಗಳಾದ ಈರಣ್ಣ, ಶರಣಬಸಪ್ಪ, ಚನ್ನಬಸವ, ನಂದಪ್ಪ, ಶಿವಾನಂದ, ಬಸವರಾಜ, ರಾಘವೇಂದ್ರ, ರಾಮಪ್ಪ, ಹುಚ್ಚರೆಡ್ಡಿ, ಅಮರೇಶ, ಹನುಮಂತ, ಅಜಿಂಪಾಷ, ನಾಗಾರ್ಜುನರವರು ಕಾರ್ಯಾಚರಣೆಯಲ್ಲಿ ಇದ್ದರು.

Related