ಕೇಂದ್ರ ಸರ್ಕಾರದ ವಿರುದ್ಧ ಗುಡುವಿಧ ಸಿಎಂ

ಕೇಂದ್ರ ಸರ್ಕಾರದ ವಿರುದ್ಧ ಗುಡುವಿಧ ಸಿಎಂ

ಹಾವೇರಿ: ಕೇಂದ್ರ ಸರ್ಕಾರ ನಮ್ಮ ಹಣವನ್ನು ನಮಗೆ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅವರು ಇಂದು ಹಾವೇರಿ ಜಿಲ್ಲೆಯ ಪ್ರವಾಸವನ್ನು ಕೈಗೊಂಡು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾವು ಈಗಾಗಲೇ ಹಾವೇರಿ ಜಿಲ್ಲೆಗೆ ಕುಡಿಯೋ ನೀರಿಗೆ ದನ ಕರುಗಳ ಮೇವಿಗೆ, ಕೆಲಸ ಕೊಡಿಸುವುದಕ್ಕೆ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ 226 ಕೋಟಿ ಹಣ ನೀಡಿದ್ದೇವೆ ನಾವೇನು ಸುಮ್ಮನೆ ಕುಳಿತಿಲ್ಲ ಎಂದು ಹೇಳಿದರು.

ಪ್ರತಿ ಜಿಲ್ಲೆಯಲ್ಲೂ ಬರಗಾಲದ ಸಮೀಕ್ಷೆಯನ್ನು ಮಾಡಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ರಾಜ್ಯ ಸರ್ಕಾರ ಬರದ ಸಮೀಕ್ಷೆ ನಡೆಸುತ್ತಿದೆ, ವರದಿಗಳನ್ನು ಆಧರಿಸಿ ಕಷ್ಟದಲ್ಲಿರುವ ರೈತರಿಗೆ ಪರಿಹಾರ ಬಿಡುಗಡೆ ಮಾಡೋದಾಗಿ ಹೇಳಿದರು.

ಆದರೆ, ಎನ್ ಡಿ ಆರ್ ಎಫ್ ಅಡಿ ರಾಜ್ಯಕ್ಕೆ ನೀಡಬೇಕಿದ್ದ ಬರ ಪರಿಹಾರ ನಿಧಿಯನ್ನು ಕೇಂದ್ರ ಸರ್ಕಾರ ಇದುವರೆಗೆ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ರಾಜ್ಯದಲ್ಲಿ ತೆರಿಗೆಯ ಮೂಲಕ ಸಂಗ್ರಹವಾದ ಹಣವನ್ನು ಕೇಂದ್ರಕ್ಕೆ ಕಳಿಸಿದ ಬಳಿಕ ಅದರ ಒಂದಷ್ಟು ಭಾಗ ರಾಜ್ಯಕ್ಕೆ ದಕ್ಕಬೇಕು, ಆದರೆ ಕೇಂದ್ರ ಆ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಹಾವೇರಿ ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವು ಮತ್ತು ಇತರ ಕೆಲಸಗಳಿಗಾಗಿ ತಮ್ಮ ಸರ್ಕಾರ ಈಗಾಗಲೇ ರೂ. 226 ಕೋಟಿ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಹೇಳಿದರು.

Related