ಕಷಾಯ ಸೇವಿಸಿ, ಆರೋಗ್ಯವಾಗಿರಿ

ಕಷಾಯ ಸೇವಿಸಿ, ಆರೋಗ್ಯವಾಗಿರಿ

ಗುಡಿಬಂಡೆ: ಅನೇಕ ಕಾಯಿಲೆಗಳಿಗೆ ನಮ್ಮ ಆರ್ಯುವೇದದಲ್ಲಿ ಚಿಕಿತ್ಸೆಯಿದ್ದು, ಪ್ರತಿಯೊಬ್ಬರೂ ಅದನ್ನು ಅರಿತುಕೊಂಡು ಪಾಲನೆ ಮಾಡಿದಾಗ ರೋಗ-ರುಜಿನಗಳಿಂದ ದೂರವಾಗಬಹುದು ಎಂದು ಗ್ರಾಮ ವಿಕಾಸ ಸಂಸ್ಥೆಯ ಮುಖ್ಯಸ್ಥ ಶ್ರೀಧರ್ ಸಾಗರ್ ತಿಳಿಸಿದರು.

ಪಟ್ಟಣದ ರಾಮ ಮಂದಿರದಲ್ಲಿ ಗ್ರಾಮ ವಿಕಾಸ ಸಂಸ್ಥೆಯ ವತಿಯಿಂದ ಕೊರೋನಾ ವೈರಸ್‍ನಿಂದ ತನ್ನನ್ನು ತಾನು ಕಾಪಾಡಿಕೊಳ್ಳುವ ನಿಮಿತ್ತ ಹಮ್ಮಿಕೊಂಡಿದ್ದ ಕಷಾಯ ಸೇವನೆ ಹಾಗೂ ವಾಯುಮಾಲಿನ್ಯ ತಡೆಗಟ್ಟಲು ಮಾಡಬೇಕಾದ ಅಗ್ನಿಹೋತ್ರದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶ ಭವ್ಯ ಪರಂಪರೆಯುಳ್ಳದ್ದು, ಹಿಂದಿನ ಕಾಲದಲ್ಲಿಯೇ ಅನೇಕ ಕಾಯಿಲೆಗಳಿಗೆ ಆರ್ಯುವೇದದ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಅತ್ಯಂತ ಅಪಾಯಕಾರಿ ಕಾಯಿಲೆಗಳನ್ನು ಸಹ ಈ ಆರ್ಯುವೇದ ಔಷಧಿಗಳ ಮೂಲಕ ಗುಣಪಡಿಸಲಾಗುತ್ತಿದ್ದು. ಆದ್ದರಿಂದ ಪ್ರಸ್ತುತ ನಮ್ಮನ್ನು ಪೀಡಿಸುತ್ತಿರುವ ಕೊರೋನಾ ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಆಯುಷ್ ಇಲಾಖೆ ತಿಳಿಸಿದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತಹ ಆಹಾರ ಪದಾರ್ಥಗಳ ಸೇವನೆ ಹಾಗೂ ಕಷಾಯಗಳನ್ನು ಸೇವಿಸಬೇಕೆಂದರು.

ನಂತರ ಗ್ರಾಮ ವಿಕಾಸ ಸಂಸ್ಥೆಯ ಸಂಚಾಲಕಿ ಅನುರಾಧ ಆನಂದ್ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಗ್ರಾಮದಲ್ಲಿ ಎಲ್ಲ ಮನೆಗಳಲ್ಲಿ ಪ್ರತಿ ದಿನ ಕಷಾಯ ಕುಡಿಯಬೇಕು. ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಲು ಅಗ್ನಿಹೋತ್ರ ಮಾಡಬೇಕು ಇದರ ಜೊತೆಗೆ ತಮ್ಮ ಅಕ್ಕಪಕ್ಕದವರಿಗೂ ಇದರ ಮಹತ್ವ ತಿಳಿಸಬೇಕು ಎಂದರು.

Related