ಗೃಹಲಕ್ಷ್ಮಿ ಯೋಜನೆ: 3 ನಕಲಿ ಆ್ಯಪ್​

ಗೃಹಲಕ್ಷ್ಮಿ ಯೋಜನೆ: 3 ನಕಲಿ ಆ್ಯಪ್​

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿಗಳಲ್ಲಿ ಘೋಷಿಸಿದ್ದು, ಈಗಾಗಲೇ ಕೆಲವು ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದ್ದೇ ಆದ ಗೃಹಲಕ್ಷ್ಮಿ ಆ್ಯಪ್ ಬಿಡುಗಡೆ ಮಾಡಲಾಗಿದೆ. ಇದು ಪ್ಲೇಸ್ಟೋರ್ ನಲ್ಲಿ ಲಭ್ಯವಿರುತ್ತದೆ.

ಇನ್ನು ಪ್ಲೇ ಸ್ಟೋರ್ ನಲ್ಲಿ ಗೃಹಲಕ್ಷ್ಮಿ ಯೋಜನೆಯಂತಹ ಮೂರು ಫೇಕ್ ಅಪ್ಗಳನ್ನು ಈಗಾಗಲೇ ಲಭ್ಯವಿರುವುದರಿಂದ ಗ್ರಾಹಕರು ಎಚ್ಚರಿಕೆಯಿಂದ ಇದರ ಬಗೆ ಗಮನ ಹರಿಸಬೇಕೆಂದು ಮನವಿ ಮಾಡಲಾಗುತ್ತಿದೆ.

ಹೌದು, ಸರ್ಕಾರ ಗೃಹ ಲಕ್ಷ್ಮೀ ಯೋಜನೆಗೆ ಪ್ರತ್ಯೇಕ ಆ್ಯಪ್ ಸಿದ್ದಪಡಿಸಿದ್ದು, ಅದರ ಮೂಲಕ ಅರ್ಜಿ ಸಲ್ಲಿಕೆ ಅವಕಾಶ ನೀಡಲು ಸರ್ಕಾರ ಪ್ಲ್ಯಾನ್ ಮಾಡಿದೆ. ಆದ್ರೆ, ಸರ್ಕಾರದ ಅಧಿಕೃತ ಗೃಹಲಕ್ಷ್ಮೀ ಆ್ಯಪ್ ಬಿಡುಗಡೆಗೂ ಮುನ್ನ ನಕಲಿ ಆ್ಯಪ್ ಗಳು ತಲೆ ಎತ್ತಿವೆ.

ಹೌದು.. ಪ್ಲೇಸ್ಟೋರ್​​​​ನಲ್ಲಿ ಗೃಹಲಕ್ಷ್ಮೀ ಹೆಸರಿನಲ್ಲಿ ಮೂರು ನಕಲಿ ಆ್ಯಪ್​ಗಳು ಪ್ರತ್ಯಕ್ಷವಾಗಿವೆ. 1. ಗೃಹಲಕ್ಷ್ಮಿ ಸ್ಕೀಮ್ ಎನ್ನುವ ಹೆಸರಿನಲ್ಲಿ ಒಂದು ಆ್ಯಪ್, 2. ಗೃಹ ಲಕ್ಷ್ಮಿ ಯೋಜನಾ ಆ್ಯಪ್, 3. ಗೃಹಲಕ್ಷ್ಮೀ ಯೋಜನೆ ಅಪ್ಲಿಕೇಶನ್ ಎನ್ನುವ ಹೆಸರಿಲ್ಲಿ ಒಟ್ಟು ಮೂರು ನಕಲಿ ಆ್ಯಪ್‌ ಪ್ಲೇ ಸ್ಟೋರಿನಲ್ಲಿ ಪತ್ತೆಯಾಗಿವೆ. ಇವು ನಕಲಿ ಆ್ಯಪ್ ಗಳಾಗಿದ್ದು, ಇದರಿಂದ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಅಪ್ಪಿತಪ್ಪಿ ಈ ನಕಲಿ ಆ್ಯಪ್​ಗಳಲ್ಲಿ ಏನಾದರೂ ಉಪಯೋಗಿಸಿದರೆ ನಕಲಿ ಆ್ಯಪ್​ ಕಿಂಗ್​ಪಿನ್​ಗಳು ನಿಮ್ಮ ಬ್ಯಾಂಕ್​ ಖಾತೆಗಳಿಗೆ ಕನ್ನ ಹಾಕುವ ಸಾಧ್ಯತೆಗಳಿವೆ.

Related