ಗೃಹಲಕ್ಷ್ಮಿ ಹಣ ಬಾರದೇ ಇರುವವರಿಗೆ ಗುಡ್ ನ್ಯೂಸ್

ಗೃಹಲಕ್ಷ್ಮಿ ಹಣ ಬಾರದೇ ಇರುವವರಿಗೆ ಗುಡ್ ನ್ಯೂಸ್

ಉಡುಪಿ,ನ.2: ರಾಜ್ಯ ಸರ್ಕಾರದ ಗ್ಯಾರಂಟಿ ಭಾಗ್ಯಗಳಲ್ಲಿ ಒಂದಾದ ಗೃಹಲಕ್ಮೀ ಯೋಜನೆ ಕಳೆದ ತಿಂಗಳು ಖಾತೆಗೆ ಹಣ ಬಾರದೇ ಇರುವ ಯಜಮಾನಿಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿಸುದ್ದಿ ನೀಡಿದ್ದು, ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಗೃಹಲಕ್ಷ್ಮಿ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಹೋಗಿ ತಿಳಿವಳಿಕೆ ನೀಡಿ ಗೃಹಲಕ್ಷ್ಮಿ ಯೋಜನೆಗೆ ಯಜಮಾನಿಯರನ್ನು ಸೇರ್ಪಡೆ ಮಾಡುತ್ತಿದ್ದಾರೆ. ಬ್ಯಾಂಕ್ ಖಾತೆ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಗೃಹಿಣಿಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಸಲಾಗುವುದು ಎಂದು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಯಜಮಾನಿಯರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಒಂದೆರಡು ದಿನ ವಿಳಂಬ ಆಗಬಹುದು. 1.8 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2.500 ಕೋಟಿ ರೂ. ಸಂದಾಯ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 6-7 ಲಕ್ಷ ಮಹಿಳೆಯರು ಉಳಿದುಕೊಂಡಿದ್ದು, ಅವರಲ್ಲಿ ಎರಡು ಲಕ್ಷ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.

Related