ಹೆಣ್ಣು ಮಕ್ಕಳಿಗೆ ಸ್ಪೂರ್ತಿದಾಯಕವಾದ ಗೃಹಲಕ್ಷ್ಮಿ ಯೋಜನೆ

ಹೆಣ್ಣು ಮಕ್ಕಳಿಗೆ ಸ್ಪೂರ್ತಿದಾಯಕವಾದ ಗೃಹಲಕ್ಷ್ಮಿ ಯೋಜನೆ

ಬೆಂಗಳೂರು: ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿಗಳನ್ನು ಘೋಷಿಸಿದ್ದು ಈಗಾಗಲೇ ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿಯನ್ನು ಜಾರಿ ಮಾಡಿದ್ದು ಎರಡನೆಯ ಯೋಜನೆ ಆಗಿರುವ ಗೃಹಲಕ್ಷ್ಮಿ ಯೋಜನೆಯನ್ನು ಕೂಡ ಜಾರಿ ಮಾಡಲು ರಾಜ್ಯ ಸರ್ಕಾರ ಮಹಿಳೆಯರಿಗೆ ಅರ್ಜಿಯನ್ನು ಸ್ವೀಕರಿಸಲು ಪ್ರಾರಂಭಿಸಿದೆ.

ಹೌದು, ಕಾಂಗ್ರೇಸ್ ಸರ್ಕಾರವು ಎರಡನೇ ಗ್ಯಾರಂಟಿಯಾಗಿ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯನ್ನು ಘೋಷಿಸಿದ್ದು, ಈ ಯೋಜನೆಗೆ ಯಾರೆಲ್ಲಾ ಅರ್ಹರು ಹಾಗೂ ಬೇಕಾಗಿರುವ ದಾಖಲೆಗಳು ಅದನ್ನು ಹೇಗೆ ಪಡೆದುಕೊಳ್ಳಬಹುದು.

ಈ ಯೋಜನೆಯು ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ. ತಮ್ಮ ಬ್ಯಾಂಕ್ ಖಾತೆಗೆ ಹಣ ಪಡೆದುಕೊಳ್ಳಬಹುದು.

1) ಗೃಹಲಕ್ಷ್ಮಿ ಯೋಜನೆಯನ್ನು (ಬಿಪಿಲ್, ಅಂತ್ಯೋದಯ, ಎಪಿಲ್) ಪಡಿತರ ಚೀಟಿಯಲ್ಲಿರುವ ಮನೆ ಯಜಮಾನಿಗೆ ಈ ಯೋಜನೆ ಪಡೆಯಲು ಅರ್ಹರಾಗಿರುತ್ತಾರೆ.

2) ಈ ಯೋಜನೆಯ ಫಲಾನುಭವಿಗಳು ಹೊಂದಿರಬೇಕಾದ ದಾಖಲೆಗಳೆಂದರೇ:-

*ಆಧಾರ್ ಕಾರ್ಡ್

*ಚುನಾವಣೆ ಗುರುತಿನ ಚೀಟಿ

* ಬ್ಯಾಂಕ್ ಪಾಸ್ ಬುಕ್ (ಆಧಾರ್ ಕಾರ್ಡ್ ಕಡ್ಡಾಯವಾಗಿ ಜೋಡಣೆಯಾಗಿರುವ ಬ್ಯಾಂಕ್ ಖಾತೆಯಾಗಿರತಕ್ಕದು.)

*ಪತಿಯ ಆಧಾರ್ ಕಾರ್ಡ್

3) ಯೋಜನೆಯನ್ನು ಪಡೆದುಕೊಳ್ಳುವುದು ಹೇಗೆ?

ಸೇವಾ ಸಿಂದೂ ಹಾಗೂ ಗ್ರಾಮ ಒನ್ ಅಪ್ಲಿಕೇಷನ್ ನಲ್ಲಿ ಅರ್ಜಿ ಸಲ್ಲಿಸಬಹುದು ಇಲ್ಲವಾದಲ್ಲಿ ಬೆಂಗಳೂರು ಒನ್, ಸೈಬರ್ ಕೇಂದ್ರ ಗಳಲ್ಲಿ ಅರ್ಜಿಸಲ್ಲಿಸಬಹುದು.

ವಿಶೇಷ ಸೂಚನೆ:- ಯೋಜನೆ ಪಡೆಯುವ ಮಹಿಳೆಯಾಗಲಿ ಅಥವಾ ಅವರ ಕುಟುಂಬದ ಸದಸ್ಯರಾಗಲಿ ಆದಾಯ ತೆರಿಗೆ ಮತ್ತು ಜಿ.ಎಸ್.ಟಿ ಪಾವತಿಸಬಾರದು. ಹಾಗೂ ಕುಟುಂಬದ ಯಾವೋಬ್ಬ ಸದಸ್ಯರುಗಳು ಸರ್ಕಾರಿ ನೌಕರರಾಗಿರಬಾರದು.

 

ಅಜಯಕುಮಾರ.ಜಿ(ಸಂಪಿಗೆಹಳ್ಳಿ)

ವರದಿಗಾರರು

Related