ರಾಜ್ಯದ ಜನರಿಗೆ ಗೃಹಜೋತಿ ಯೋಜನೆ ಶಾಕ್!

ರಾಜ್ಯದ ಜನರಿಗೆ ಗೃಹಜೋತಿ ಯೋಜನೆ ಶಾಕ್!

ಬೆಂಗಳೂರು: ಕಾಂಗ್ರೆಸ್ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಉಚಿತ ವಿದ್ಯುತ್ ಗೃಹಜೋತಿ ಯೋಜನೆಯನ್ನು ಜಾರಿ ಮಾಡಲಾಗಿದ್ದು ಆಗಸ್ಟ್ 1 ರಿಂದ ಗ್ರಾಹಕರಿಗೆ ಶೂನ್ಯ ಬಿಲ್ ಬರಲಿದೆ ಎಂದು ತಿಳಿಸಿದ್ದಾರೆ.

ಇನ್ನು ಉಚಿತ ವಿದ್ಯುತ್ ಎಂದು ಜನರು 200 ಯೂನಿಟ್ ಗಿಂತ ಹೆಚ್ಚು ಬಳಸಿದ್ದಾರೆ ಆದ್ದರಿಂದ ಅವರಿಗೆ ವಿದ್ಯುತ್ ದರ ಬಂದಿದೆ ಇದರಿಂದ ಬೆಸ್ಕಾಂ ಅಧಿಕಾರಿಗಳಿಗೆ ಗ್ರಾಹಕರು ನಿಮ್ಮ ಮೀಟರ್ ಸರಿ ಇಲ್ಲ ಅಂತ ಹೇಳುತ್ತಿದ್ದಾರೆ.

ಗೃಹ ಜ್ಯೋತಿ ಯೋಜನೆಯಿಂದ ಬಹುತೇಕ ಫಲಾನುಭವಿಗಳು ಫ್ರೀ ಬಿಲ್ ನಿರೀಕ್ಷೆಯಲ್ಲಿದ್ದರು. ಆದರೆ ಕೆಲವರಿಗೆ ಮಾತ್ರ ಬೆಸ್ಕಾಂ ಸಿಬ್ಬಂದಿ ಬಿಲ್ ಕೈಗಿಟ್ಟಿದ್ದು ಶಾಕ್ ಆಗಿದ್ದಾರೆ. ಗೃಹ ಜ್ಯೋತಿ ಯೋಜನೆಗೆ ಅಪ್ಲೈ ಮಾಡಿದಾಗಿನಿಂದ ಕೆಲವು ಫಲಾನುಭವಿಗಳು ಉಚಿತ ಕರೆಂಟ್ ಅಂತ ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಿದ್ದು, ಜುಲೈ ತಿಂಗಳ ಬಿಲ್ ಶೂನ್ಯ ಅಂದವರಿಗೆ 200 ಯೂನಿಟ್ ಹೆಚ್ಚುವರಿ ಬಿಲ್ ಬೆಸ್ಕಾಂ ಸಿಬ್ಬಂದಿ ಕೈಗಿಟ್ಟಿದ್ದಾರೆ.

ಸರ್ಕಾರದ 200 ಯೂನಿಟ್ ಗಿಂತ ಹೆಚ್ಚಾಗಿ ಯೂನಿಟ್ ಬಳಕೆ ಹಿನ್ನಲೆ ಬಿಲ್ ನೀಡಿದ್ದು, ಈಗ ಫಲಾನುಭವಿಗಳು ಮಾತ್ರ ನಾವು ಅಷ್ಟು ಬಳಸೇ ಇಲ್ಲ ಮೀಟರ್ ಸರಿ ಇಲ್ಲ ಎಂದು ಹೊಸ ವರಸೆ ಶುರುಮಾಡಿಕೊಂಡಿದ್ದಾರಂತೆ.

 

Related