ಗೃಹ ಜ್ಯೋತಿ ಅರ್ಜಿ ಸಲ್ಲಿಕೆ ಅವಾಂತರ!

ಗೃಹ ಜ್ಯೋತಿ ಅರ್ಜಿ ಸಲ್ಲಿಕೆ ಅವಾಂತರ!

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಗೃಹ ಜ್ಯೋತಿ ಉಚಿತ ಯೋಜನೆ ಅನುಕೂಲ ಪಡಿಯುವುದಕ್ಕಾಗಿ ಅರ್ಜಿ ಸಲ್ಲಿಕೆ ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ ಎಂದು ಸರ್ಕಾರ ಪ್ರಕಟಿಸಿದೆಯಾದರು ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಕ್ರಿಯೆ ಆರಂಭಕ್ಕೆ ಅಡ್ಡಿಯಾಗಿದೆ. ಬೆಂಗಳೂರು ಮತ್ತು ರಾಜ್ಯದ ನಾನಾ ಕಡೆಗಳಲ್ಲಿ ಈ ಸಮಸ್ಯೆಯಾಗಿದ್ದು ಮೂದಲ ದಿನವೇ ಅರ್ಜಿ ಸಲ್ಲಿಕೆಯ ಸೇವಾಸಿಂಧು ಪೋರ್ಟಲ್‌ ಏರು ಪೇರಾಗಿದೆ.

ಹೌದು, ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಈ ಮಹತ್ವಾಕಾಂಕ್ಷಿ ಯೋಜನೆಯ ಅರ್ಜಿ ಸ್ವಿಕಾರ ಜೂನ್‌ 15 ರಿಂದಲೇ ಆರಂಭವಾಗಬೇಕಿತ್ತು ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಅದು ಮುಂದಕ್ಕೆ ಹೊಗಿತ್ತು ಇದೀಗ  ಜೂನ್‌ 18 ರಿಂದ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ಹೀಗಾಗಿ ಆರಂಭದಲ್ಲೆ ಅರ್ಜಿ ಸಲ್ಲಿಸಿಬಿಡೋಣ ಎಂಬ ತರಾತುರಿಯಲ್ಲಿ ಬೆಂಗಳೂರು ಒನ್‌, ಎಸ್ಕಾಂ ಕಛೇರಿಗಳಿಗೆ ಜನ ಬೆಳಗ್ಗೆಯೇ ಬಂದು ನಿಂತಿದ್ದರು ಕೆಲವು ಕಡೆ 11 ಗಂಟೆಗೆ ಅರ್ಜಿ ಸಲ್ಲಿಕೆ ವ್ಯವಸ್ಥೆ ಆರಂಭ ಮಾಡಿದರೆ ಇನ್ನು ಕೆಲವು ಕಡೆ ಮಧ್ಯಾಹ್ನ 1 ಗಂಟೆ, ಮೂರು ಗಂಟೆ ಎಂದು ಸಬೂಬು ಹೇಳಲಾಗುತ್ತಿದೆ

ಏಕ ಕಾಲದಲ್ಲಿ ಹಲವು ಕಡೆ ಅರ್ಜಿ ಸಲ್ಲಿಸಲು ಮುಂದಾದ ಕಾರಣಕ್ಕೆ ಸೇವಾ ಸಿಂಧು ಫೋರ್ಟಲ್‌ ಕೆಲಸ ಮಾಡುತ್ತಿಲ್ಲ ಎಂಬ ಆಪಾದನೆ ಕೇಳಿ ಬಂದಿದೆ.

ರಾಜ್ಯದ ಕೆಲವು ಕಡೆ ಅರ್ಜಿ ಸಲ್ಲಿಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದರೂ ಇನ್ನೂ ಸೇವಾ ಕೇಂದ್ರದವರು ಸೇವೆಯನ್ನೇ ಶುರು ಮಾಡಿಲ್ಲ. ಕೆಲವು ಕಡೆ ಸಿಬ್ಬಂದಿ ಸೇವೆಗೆ ರೆಡಿ ಇದ್ದಾರೆ ಆದರೆ ಜನರೆ ಇಲ್ಲಾ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

 

Related