ಗ್ರಾಮ ಆಡಳಿತ ಅಧಿಕಾರಿಗಳ ಭರ್ಜರಿ ನೇಮಕಾತಿ..!

ಗ್ರಾಮ ಆಡಳಿತ ಅಧಿಕಾರಿಗಳ ಭರ್ಜರಿ ನೇಮಕಾತಿ..!

ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಸುಮಾರು 1000 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆ ಖಾಲಿ ಇದ್ದು ಈ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಆನ್ಲೈನ್ ಮುಖಾಂತರ ಪಿಯುಸಿ ಅಥವಾ ತತ್ಸಮ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಹೌದು, ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಯನ್ನು ಹೊಂದಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೊಡಲೇ ಆನ್ಲೈನ್ ಮುಖಾಂತರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಏಪ್ರಿಲ್ 05 ರಂದು ಆನ್‌ಲೈನ್‌ ಅರ್ಜಿಗೆ ಲಿಂಕ್‌ ಹಾಗೂ ಅರ್ಜಿ ಸಲ್ಲಿಸಲು ಹೊಸ ವೇಳಾಪಟ್ಟಿ ಎರಡನ್ನೂ ಬಿಡುಗಡೆ ಮಾಡಿದೆ. ದ್ವಿತೀಯ ಪಿಯುಸಿ ಮುಗಿಸಿ ಸರ್ಕಾರಿ ಹುದ್ದೆಗಾಗಿ ಮುನ್ನೋಡುತ್ತಿರುವ ಆಕಾಂಕ್ಷಿಗಳು ಈಗ ತಪ್ಪದೇ ಆನ್‌ಲೈನ್‌ ಅರ್ಜಿ ಸಲ್ಲಿಸಿ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 05-04-2024

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04-05-2024

 

ಆಸಕ್ತರು ಕೆಇಎ ವೆಬ್‌ವಿಳಾಸ https://cetonline.karnataka.gov.in/kea/ ಕ್ಕೆ ಭೇಟಿ ನೀಡಿ.

 

ಅರ್ಜಿ ಶುಲ್ಕ ವಿವರ

ಸಾಮಾನ್ಯ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.

ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ ರೂ.500.

ಹುದ್ದೆ ಹೆಸರು : ಗ್ರಾಮ ಆಡಳಿತ ಅಧಿಕಾರಿ (VA – ಗ್ರಾಮ ಲೆಕ್ಕಿಗ)

ಹುದ್ದೆಗಳ ಸಂಖ್ಯೆ : 1000

ವೇತನ ಶ್ರೇಣಿ : Rs.21400-42000.

ವಿದ್ಯಾರ್ಹತೆ

ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ಪಾಸ್‌. ಅಥವಾ

ಸಿಬಿಎಸ್‌ಇ /ಎನ್‌ಐಓಎಸ್‌ ನಡೆಸುವ ಹೆಚ್‌ಎಸ್‌ಸಿ / ಐಸಿಎಸ್‌ಇ ನಡೆಸುವ 12ನೇ ತರಗತಿ ಪಾಸ್‌ ಅರ್ಹತೆ. ಅಥವಾ

3 ವರ್ಷಗಳ ಡಿಪ್ಲೊಮ ಅಥವಾ 2 ವರ್ಷಗಳ ಐಟಿಐ ಕೋರ್ಸ್‌ ಅಥವಾ 2 ವರ್ಷಗಳ ಯಾವುದೇ ವೃತ್ತಿ ಶಿಕ್ಷಣ ಡಿಪ್ಲೊಮ (ಜೆಓಸಿ / ಜೆಓಡಿಸಿ / ಜೆಎಲ್‌ಡಿಸಿ) ಉತ್ತೀರ್ಣರಾಗಿರಬೇಕು.

 

Related