ಮಾಶಾಸನ ಹಣ ದೆಣಿಗೆ ನೀಡಿದ ಅಜ್ಜಿ

ಮಾಶಾಸನ ಹಣ ದೆಣಿಗೆ ನೀಡಿದ ಅಜ್ಜಿ

ಮೈಸೂರು : ಕೊರೊನಾ ವೈರಸ್ ರಿಟೇಜ್ ಮೈಸೂರು ಸಂಸ್ಥೆಯವರು ನೀಡುತ್ತಿದ್ದ ಊಟ ಸಂತೃಪ್ತಿ ತಂದಿದೆ. ನಮ್ಮ ರೋಟರಿ ಹೆರಿಟೇಜ್ ಸಂಸ್ಥೆ ವತಿಯಿಂದ ಮೈಸೂರು ನಗರದ ಕೆಲ ಪ್ರದೇಶಗಳಲ್ಲಿಬಡವರಿಗೆ ನಿತ್ಯ ಊಟ ನೀಡಲಾಗಿದ್ದು, ಅದರಂತೆ ಚೆನ್ನಗಿರಿ ಕೊಪ್ಪಲಿಗೂ ಸಹ ನೀಡಲಾಗುತ್ತಿತ್ತು. ಅಲ್ಲಿನ ನಿವಾಸಿಯಾದ ಕಮಲಮ್ಮ ತಮ್ಮ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವು ಆಹಾರ ನೀಡುವ ಸ್ಥಳಕ್ಕೆ ಬಂದು ತಮ್ಮ ಮಾಸಾಶನದ ಹಣವನ್ನು ನೀಡಿದ್ದಾರ.

ಮನೆ ಕೆಲಸದ ಮಾಲೀಕರು ನೀಡುತ್ತಿದ್ದ ಊಟವೂ ಕೈ ತಪ್ಪಿದ್ದರಿಂದ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿಯಾಗಿತ್ತು. ಆದರೆ ದಾನಿಗಳು ನೀಡಿದ ಆಹಾರದಿಂದ ಸಂತೃಪ್ತರಾಗಿ ನೆಮ್ಮದಿಯ ಜೀವನ ನಡೆಸಿದರು. ತನ್ನಂತೆ ಇತರರಿಗೂ ಆಹಾರ ನೀಡಲು ಸಹಾಯವಾಗಲಿ. ಪತಿಯ ನಿಧನದ ಬಳಿಕ ಮಕ್ಕಳ ಮೇಲೆ ಅವಲಂಬಿತರಾಗದೇ ನಾಲ್ಕೆöÊದು ಮನೆಗಳಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಕಷ್ಟ ಕಾಲದಲ್ಲಿ ಊಟ ನೀಡಿದ ಸಂಸ್ಥೆಗೆ ನೆರವು ನೀಡಬೇಕೆಂದು ನಿರ್ಧರಿಸಿದ ಕಮಲಮ್ಮ ತಮಗೆ ನಿತ್ಯ ಊಟ ತಂದು ಕೊಡುತ್ತಿದ್ದ ಮಹಾದೇವ್ ಅವರನ್ನು ಸಂಪರ್ಕಿಸಿ, ರೋಟರಿ ಹೆರಿಟೇಜ್ ಮೈಸೂರು ಸಂಸ್ಥೆಯ ಅಧ್ಯಕ್ಷ ತಲಕಾಡು ಮಂಜುನಾಥ್ ಅವರನ್ನು ಭೇಟಿ ಮಾಡಿ, ಒಂದು ತಿಂಗಳ ಮಾಸಾಶನ ನೀಡಿ, ಅವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related