ಗ್ರಾ.ಪಂ ಮತದಾನಕ್ಕೆ ತಾಲೂಕಾಡಳಿತ ಸನ್ನದ್ಧ

ಗ್ರಾ.ಪಂ ಮತದಾನಕ್ಕೆ ತಾಲೂಕಾಡಳಿತ ಸನ್ನದ್ಧ

ಗಜೇಂದ್ರಗಡ : ಗ್ರಾಮ ಪಂಚಾಯತಿ ದ್ವಿತೀಯ ಹಂತದ ಚುನಾವಣೆ ನಡೆಯಲಿದ್ದು ಗಜೇಂದ್ರಗಡ ತಾಲೂಕಿನ 63 ಬೂತ್‌ಗಳಲ್ಲಿ ಮತದಾನ ನಡೆಸಲು ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಆಯಾ ತಾಲೂಕು ಮಸ್ಟರಿಂಗ್ ಕೇಂದ್ರಗಳ ಮೂಲಕ ಬ್ಯಾಲೆಟ್‌ಪೇಪರ್, ಮತಪೆಟ್ಟಿಗೆ, ಶಾಹಿ ಸೇರಿದಂತೆ ವಿವಿಧ ಅಗತ್ಯ ಪರಿಕರಗಳನ್ನು ಪಡೆದು ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ ಹಾಗೂ ಪೊಲೀಸರು ಶಾಂತಿಯುತ ಮತದಾನಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಭಾನುವಾರ ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಸರ್ಕಾರಿ ಶಾಲೆಗಳನ್ನು ಮತದಾನ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಈಗಾಗಲೇ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್ ಅಶೋಕ ಕಲಘಟಗಿ ಮಾಹಿತಿ ನೀಡಿದರು.

Related