ಸರ್ಕಾರದ ಯೋಜನೆ ಸೌಲಭ್ಯ ಪಡೆಯಬೇಕು

ಸರ್ಕಾರದ ಯೋಜನೆ ಸೌಲಭ್ಯ ಪಡೆಯಬೇಕು

ಕೆಂಭಾವಿ :ಪಟ್ಟಣದಲ್ಲಿ ಕರ್ನಾಟಕ ಜರ್ನಾಲಿಸ್ಟ್ ಯೂನಿಯನ್ ಯಾದಗಿರಿ ಜಿಲ್ಲಾ ಸರ್ವ ಸದಸ್ಯರ ಸಭೆ ಬುಧವಾರ ನಡೆಸಲಾಯಿತು.
ಕೆಜೆಯೂ ರಾಜ್ಯಾಧ್ಯಕ್ಷ ಬಿ. ನಾರಾಯಣ ಸಭೆಯನ್ನುದ್ದೇಶಿಸಿ ಮಾತನಾಡಿ, ಪತ್ರಕರ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರದ ಜನಪ್ರತಿನಿಧಿಗಳ ಅನುದಾನದಲ್ಲಿ ಪತ್ರಿಕಾ ಭವನಗಳನ್ನು ಎಲ್ಲೆಡೆ ನಿರ್ಮಾಣ ಮಾಡಿಕೊಡಲಾಗುತ್ತದೆ. ಪ್ರತಿಕಾ ಭವನವು ಆಯಾ ಭಾಗದ ಎಲ್ಲಾ ಪತ್ರಕರ್ತರ ಅನುಕೂಲಕ್ಕಾಗಿಯೇ ಹೊರತು ಒಂದು ಸಂಘಟನೆಯ ಸದಸ್ಯರಿಗೆ ಸೀಮಿತವಾಗಿಲ್ಲ. ಕೆಲವೆಡೆ ಕೇವಲ ಸಂಘಟನೆಯವರು ಪತ್ರಿಕಾ ಭವನವು ತಮ್ಮದೆಂಬ ಭಾವನೆಯಲ್ಲಿ ಉಪಯೋಗಿಸುತ್ತಿದ್ದಾರೆ. ಸರ್ಕಾರ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತಂದು ಎಲ್ಲ ಪತ್ರಕರ್ತರು ಉಪಯೋಗಿಸಿಕೊಳ್ಳುವಂತೆ ಮಾಡಲಾಗುವುದು ಎಂದರು.
ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ಆರೋಗ್ಯ ವಿಮೆ ಯೋಜನೆಯನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪಟ್ಟಿಯಲ್ಲಿನ ಪತ್ರಕರ್ತರನ್ನು ಸಹ ಆರೋಗ್ಯ ವಿಮೆ ಯೋಜನೆಗೆ ಒಳಪಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು.
ಕೇಂದ್ರ ಸರ್ಕಾರ ಇ-ಶ್ರಮ ಅಡಿಯಲ್ಲಿ 50 ಕ್ಕೂ ಅಸಂಘಟಿತ ಕಾರ್ಮಿಕರ ಕಾರ್ಡ್ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದು, ಬಿಡಿ ವರದಿಗಾರರು ಪತ್ರಿಕಾ ವಿತರಕರನ್ನು ಸಹ ಅಸಂಘಟಿತ ಕಾರ್ಮಿಕರಂತೆ ಪರಿಗಣಿಸಿ ಸರ್ಕಾರದ ಯೋಜನೆಗಳಿಗೆ ಒಳಪಡಿಸಿದೆ. ಗ್ರಾಮೀಣ ಭಾಗದ ಪತ್ರಕರ್ತರು, ಪತ್ರಿಕಾ ವಿತರಕರು ಇ-ಶ್ರಮ ವೆಬ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಸರ್ಕಾರದ ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಐಎಫ್‌ಡಬ್ಲೂ್ಯಜೆ ಸದಸ್ಯ ಪವನ ಕುಲಕರ್ಣಿ, ಕೆಜೆಯೂ ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲ್, ಸುರಪುರ ತಾಲ್ಲೂಕಾಧ್ಯಕ್ಷ ರಾಜು ಕುಂಬಾರ ಗ್ರಾಮೀಣ ಭಾಗದಲ್ಲಿನ ಪತ್ರಕರ್ತರ ಸಮಸ್ಯೆಗಳ ಕುರಿತು ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ವೀರಣ್ಣ ಕಲಕೇರಿ, ಹುಣಸಗಿ ತಾಲ್ಲೂಕಾಧ್ಯಕ್ಷ ಬಾಪುಗೌಡ ಮೇಟಿ, ಹಿರಿಯ ಪತ್ರಕರ್ತರಾದ ಮಲ್ಲು ಗುಳಗಿ, ಮಹಾದೇವಪ್ಪ ಕಟ್ಟಿಮನಿ, ಕ್ರೀಸ್ಟೋಫರ್, ರವಿರಾಜ ಕಂದಳ್ಳಿ ಸೇರಿದಂತೆ ಯಾದಗಿರಿ, ಸುರಪುರ, ಹುಣಸಗಿ ಹಾಗೂ ಕೆಂಭಾವಿ ಪತ್ರಕರ್ತರು ಇದ್ದರು.
ಕೋಟ್:
ಆಂಧ್ರಪ್ರದೇಶ-ತೆಲAಗಾಣ ಸರ್ಕಾರಗಳು ಗ್ರಾಮೀಣದ ಎಲ್ಲಾ ಭಾಗದ 25 ಸಾವಿರಕ್ಕೂ ಹೆಚ್ಚು ಪತ್ರಕರ್ತರಿಗೆ ಅಕ್ರೆಡೆಷನ್ ಕಾರ್ಡ್ ನೀಡಿದೆ. ಕರ್ನಾಟಕ ಗ್ರಾಮೀಣ ಭಾಗದ ಪತ್ರಕರ್ತರಿಗೂ ಸಹ ಅಕ್ರೆಡೆಷನ್ ಕಾರ್ಡ್ ನೀಡುವಂತೆ ದಾಖಲೆಗಳೊಂದಿಗೆ ಸರ್ಕಾರದ ಗಮನಕ್ಕೆ ತರಲಾಗುವುದು.
– ಬಿ.ನಾರಾಯಣ, ರಾಜ್ಯಾಧ್ಯಕ್ಷರು ಕೆಜೆಯೂ ಬೆಂಗಳೂರು.

Related