ಸರ್ಕಾರದಿಂದ ವಾಹನ ಸವಾರರಿಗೆ ಗುಡ್ ನ್ಯೂಸ್

  • In State
  • July 5, 2023
  • 134 Views
ಸರ್ಕಾರದಿಂದ ವಾಹನ ಸವಾರರಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದ ಜನತೆಗೆ ಸಂಚಾರಿ ನಿಗಮ ದಿಂದ ಗುಡ್ ನ್ಯೂಸ್ ನೀಡಿದೆ. ಸಂಚಾರ ನಿಯಮ ಉಲ್ಲಂಘನೆಗಾಗಿ ವಾಹನ ಸವಾರರಿಗೆ ವಿಧಿಸಲಾಗಿದ್ದ ದಂಡ ಮೊತ್ತದಲ್ಲಿ ಶೇ.50 ರಿಯಾಯಿತಿ ಘೋಷಣೆ ಮಾಡಲಾಗಿತ್ತು. ಚುನಾವಣೆ ಸಂದರ್ಭ ಈ ರಿಯಾಯಿತಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಶೇ.50 ರಿಯಾಯಿತಿ ಘೋಷಿಸಿ ಅವಕಾಶ ನೀಡಲಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಸೆಪ್ಟೆಂಬರ್ 9 ರವರೆಗೆ ಈ ಆದೇಶ  ಜಾರಿಯಲ್ಲಿರಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ನರೇಂದ್ರ ಮಾಹಿತಿ ನೀಡಿದ್ದಾರೆ.

ಈ ಹಿಂದೆ 25 ದಿನಗಳ ಕಾಲ ರಿಯಾಯಿತಿ ನೀಡಿ ಆದೇಶ ಹೊರಡಿಸಲಾಗಿತ್ತು. ಇದೀಗ ಮತ್ತೆ ಅವಕಾಶ ನೀಡಿದ್ದು, ಸೆಪ್ಟೆಂಬರ್ 9 ರವರೆಗೆ ಅವಕಾಶ ನಿಡಲಾಗಿದೆ. ಸಂಚಾರಿ ಪೊಲೀಸ್ ಇಲಾಖೆಯ ಇ-ಚಲನ್‌ನಲ್ಲಿ ಫೆಬ್ರವರಿ 11, 2023ರ ಒಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಈ ಅವಕಾಶ ನೀಡಲಾಗಿದೆ.

Related