ಗುಡ್ ನ್ಯೂಸ್ ಕೊಟ್ಟ ಕಿರುತೆರೆ ನಟಿ

ಗುಡ್ ನ್ಯೂಸ್ ಕೊಟ್ಟ ಕಿರುತೆರೆ ನಟಿ

ಕಿರುತೆರೆ ಲೋಕದ ಜನಪ್ರಿಯ ಸೆಲೆಬ್ರಿಟಿ ಕಪಲ್ ರಘು ಮತ್ತು ಅಮೃತಾ ಮೂರ್ತಿ ಎರಡನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ತಮ್ಮ ಕುಟುಂಬಕ್ಕೆ ಶೀಘ್ರವೇ ಪುಟ್ಟ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ಹಸಿರು ಬಣ್ಣದ ಸೆಲ್ವಾರ್‌ನಲ್ಲಿ ಅಮೃತಾ, ಫ್ಲೋಲರ್ ಶರ್ಟ್ನಲ್ಲಿ ರಘು ಮಿಂಚುತ್ತಿದ್ದಾರೆ. ಸಂತೋಷದ ವಿಚಾರ ಕೇಳುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭ ಹಾರೈಸಿದ್ದಾರೆ ಹಾಗೂ ಅಮೃತಾ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಮಿಸ್ಟರ್ ಆ್ಯಂಡ್ ಮಿಸಸ್ ರಾಗೇಗೌಡ ಧಾರಾವಾಹಿ ಮೂಲಕ ಈ ಜೋಡಿ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದು. ಇಬ್ಬರೂ ಹಲವು ವರ್ಷಗಳ ಕಾಲ ಪ್ರೀತಿಸಿ, ಪೋಷಕರ ಒಪ್ಪಿಗೆ ಪಡೆದು 2019 ಮೇ 13ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ರಘು ಅಭಿನಯಿಸಿದ್ದಾರೆ. ಕಿರುತೆರೆ ಜೊತೆ ಹಲವು ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದಾರೆ.

Related