ಸಾರಿಗೆ ಇಲಾಖೆಯಿಂದ ವಾಹನ ಸವಾರರಿಗೆ ಸಿಹಿ ಸುದ್ದಿ

ಸಾರಿಗೆ ಇಲಾಖೆಯಿಂದ ವಾಹನ ಸವಾರರಿಗೆ ಸಿಹಿ ಸುದ್ದಿ

ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆಯಿಂದ ಸಾರ್ವಜನಿಕರಿಗೆ ಒಳಿತಾಗಲೆಂದು, ಸಾರ್ವಜನಿಕರು ಆರ್‌ಸಿ ಮತ್ತು ಡಿಎಲ್ ಗೆ ಅಪ್ಲಿಕೇಶನ್ ಹಾಕಿರುವಂತಹ ಸಾರ್ವಜನಿಕರಿಗೆ ಈಗ ಸಾರಿಗೆ ಇಲಾಖೆ ಒಂದೊಳ್ಳೆ ಅನುಕೂಲವನ್ನು ಮಾಡಿಕೊಟ್ಟಿದೆ.

ಹೌದು, ಕರ್ನಾಟಕ ವೃತ್ತದ ಅಂಚೆ ಇಲಾಖೆ ವತಿಯಿಂದ ಸ್ಪೀಡ್ ಪೋಸ್ಟ್ ಮೂಲಕ RC ಮತ್ತು DL ಸ್ಮಾರ್ಟ್ ಕಾರ್ಡ್‌ಗಳ ಬುಕಿಂಗ್ ಮತ್ತು ವಿತರಣೆಗಾಗಿ ತಿಳುವಳಿಕೆ ಪತ್ರದ ವಿನಿಮಯವನ್ನು ಮಾಡಿಕೊಳ್ಳಲಾಯಿತು.

ಅಂಚೆ ಇಲಾಖೆಯು ರಾಜ್ಯದ 67 ಆರ್‌ಟಿಒ ಕಚೇರಿಗಳ ಆವರಣದಿಂದ RC/DL ದಾಖಲೆಗಳ ಸಂಗ್ರಹಣೆಗೆ ವ್ಯವಸ್ಥೆ ಮಾಡಲಾಗಿದೆ. ಇವುಗಳ ಬುಕಿಂಗ್‌ಗಾಗಿ ಕೇಂದ್ರೀಕೃತ ಸ್ಪೀಡ್ ಪೋಸ್ಟ್ ಖಾತೆಯನ್ನು ರಚಿಸಲಾಗಿದೆ ಮತ್ತು ಗುರುತಿಸಲಾದ 67 ಅಂಚೆ ಕಚೇರಿಗಳಲ್ಲಿ ಸಕ್ರಿಯಗೊಳಿಸಲಾಗಿದೆ. ರಾಜ್ಯದ ವಿವಿಧ RTO ಗಳಲ್ಲಿ ಕಾಯ್ದಿರಿಸಿದ RC ಮತ್ತು DL ಗಾಗಿ ಒಂದೇ ಪಾವತಿಯನ್ನು ಮಾಡಲು ರಾಜ್ಯ ಸಾರಿಗೆ ಇಲಾಖೆಗೆ ಕೇಂದ್ರೀಕೃತ ಬಿಲ್ಲಿಂಗ್ ಮತ್ತು ಪಾವತಿ ಸೌಲಭ್ಯವನ್ನು ಸಹ ಒದಗಿಸಲಾಗಿದೆ.

ಪ್ರತಿ ತಿಂಗಳು ಈ ಎಲ್ಲಾ 67 RTO ಸ್ಥಳಗಳಿಂದ ಸ್ಪೀಡ್ ಪೋಸ್ಟ್ ಖಾತೆಯ ಅಡಿಯಲ್ಲಿ 5 ಲಕ್ಷ ಸ್ಮಾರ್ಟ್ ಕಾರ್ಡ್‌ಗಳನ್ನು ಬುಕ್ ಮಾಡುವ ನಿರೀಕ್ಷೆಯಿದೆ.

ಸಾರಿಗೆ ಇಲಾಖೆ ಆಯುಕ್ತರಾದ ಶ್ರೀ ಎ.ಎಂ ಯೋಗೇಶ್, ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ವೃತ್ತ ಶ್ರೀ ಎಸ್. ರಾಜೇಂದ್ರ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

Related