ವೈದ್ಯರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ವೈದ್ಯರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಹಾವೇರಿ : ಮುಖ್ಯಮಂತ್ರಿ ಯಡಿಯೂರಪ್ಪನವರ ಒತ್ತಾಸೆಯಿಂದ ರಾಜ್ಯದಲ್ಲಿ ಈ ವರ್ಷ ನಾಲ್ಕು ನೂತನ ವೈದ್ಯಕೀಯ ಕಾಲೇಜ್ಗಳು ಮಂಜೂರಾಗಿವೆ. ಈ ಪೈಕಿ ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜು ಒಂದಾಗಿದ್ದು, ರೂ.500 ಕೋಟಿ ವೆಚ್ಚದಲ್ಲಿ ಈ ಕಾಲೇಜ್ ನಿರ್ಮಾಣವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ ಹೇಳಿದರು.

ದೇವಗಿರಿ-ಯಲ್ಲಾಪೂರದ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡದ ನಿವೇಶನದಲ್ಲಿ ಆಯೋಜಿಸಲಾದ ನೂತನ ಸರ್ಕಾರಿ ವೈದ್ಯಕೀಯ ಕಾಲೇಜ್ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸಾರ್ವಕಾಲಿಕ ಆಕರ್ಷಣೀಯ ವಿಶೇಷ ವಿನ್ಯಾಸ ಒಳಗೊಂಡ ನೂತನ ವೈದ್ಯಕೀಯ ಸರ್ಕಾರಿ ಕಾಲೇಜ್ ನಿರ್ಮಾಣ ಮಾಡಲಾಗುವುದು. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಅತ್ಯ್ತುನ್ನತ, ಅತ್ಯಾಧುನಿಕ ಆರೋಗ್ಯ ಸೇವೆಯ ಸಂಕೀರ್ಣವನ್ನು ನಿರ್ಮಾಣ ಮಾಡಲಾಗುವುದು 157 ಕಾಲೇಜುಗಳ ಶಂಕುಸ್ಥಾಪನೆಯಾಗಿದೆ.

ಈ ಕಾಲೇಜುಗಳ ಆರಂಭದಿAದ 27 ಸಾವಿರ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್, 17 ಸಾವಿರ ವಿದ್ಯಾರ್ಥಿಗಳು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಇದರಿಂದ ಸಾಮಾನ್ಯ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣ ಪಡೆಯುವ ಕನಸು ನನಸಾಗಲಿದೆ. ರಾಜಕೀಯ ಇಚ್ಚಾಶಕ್ತಿ, ಸಾಮಾಜಿಕ ಬದ್ಧತೆ ಇರುವ ಸರ್ಕಾರದಿಂದ ಇಂತಹ ಕಾರ್ಯ ಸಾಧ್ಯ ಎಂದು ಹೇಳಿದರು.

Related