ಡು ಪ್ಲೆಸಿಸ್ ಗುಡ್ ಬೈ

ಡು ಪ್ಲೆಸಿಸ್ ಗುಡ್ ಬೈ

ಜೊಹಾನ್ಸ್ಬರ್ಗ್ ಫೆ. 18 : ಆಫ್ರಿಕಾ ಕ್ರಿಕೆಟ್ ತಂಡದ ಅನುಭವಿ ಆಟಗಾರ ಫಾ ಡು ಪ್ಲೆಸಿಸ್ ಟೆಸ್ಟ್ ಮತ್ತು ಟಿ20 ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ (ಸಿಎಸ್ಎ) ಮನವಿ ಮಾಡಿದ್ದಾರೆ.
“ನಾಯಕತ್ವ ಪಡೆದ ದಿನದಿಂದ ತಂಡವನ್ನು ಉತ್ತಮ ಹಾದಿಯಲ್ಲಿ ಮುನ್ನಡೆಸುವ, ಶ್ರೇಷ್ಠ ಆಟವಾಡುವ ಹಾಗೂ ರಾಷ್ಟ್ರೀಯ ತಂಡಕ್ಕೆ ಸೇವೆ ಸಲ್ಲಿಸುವ ಬದ್ಧತೆಯೊಂದಿಗೆ ಹೆಜ್ಜೆಯಿಟ್ಟಿದ್ದೆ. ಇದೀಗ ತಂಡ ಹೊಸ ಹಾದಿಯ ಕಡೆಗೆ ಸಾಗುತ್ತಿದೆ. ಹೊಸ ಆಟಗಾರರು ಬಂದಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸರ್ವತೋಮುಖ ಬೆಳವಣಿಗೆ ನಿಟ್ಟಿನಲ್ಲಿ ನಾನು ನಾಯಕತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ’ ಎಂದು ಡು ಪ್ಲೆಸಿಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related