ಗೋಕಾಕ್ ಉದ್ವಿಘ್ನ; ವ್ಯಾಪಕ ಪ್ರತಿಭಟನೆ

ಗೋಕಾಕ್ ಉದ್ವಿಘ್ನ; ವ್ಯಾಪಕ ಪ್ರತಿಭಟನೆ

ಬೆಳಗಾವಿ : ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಹಿನ್ನೆಲೆ, ಬೆಂಬಲಿಗರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದೊಂದು ಪಿತೂರಿ, ಪೂರ್ವ ನಿಯೋಜಿತ ಕೃತ್ಯ, ಸಿಡಿ ಬಿಡುಗಡೆ ಮಾಡಿ ದಿನೇಶ್ ಕಲ್ಲಹಳ್ಳಿ ಬಂಧಿಸುವಂತೆ. ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದರಿಂದ ಗೋಕಾಕ್‌ನಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಜಾರಕಿಹೊಳಿ ಕ್ಷೇತ್ರದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.  ಗೋಕಾಕ್ ನಗರ ನಿಗಿ ನಿಗಿ ಕೆಂಡದಂತಾಗಿದ್ದು, ಸುಮಾರು 10 ಕಿ.ಮೀವರೆಗೂ ಬೆಂಬಲಿಗರು ರ‍್ಯಾಲಿ ನಡೆಸುತ್ತಿದ್ದಾರೆ. ಕೊಣ್ಣೂರು ಪಟ್ಟಣದಿಂದ ಗೋಕಾಕ ನಗರದವರೆಗೆ ರ‍್ಯಾಲಿ ನಡೆಯುತ್ತಿದೆ.

ಇನ್ನು ಮಾಲದಿನ್ನಿ ಕ್ರಾಸ್ ಸೇರಿದಂತೆ ಎರಡ್ಮೂರು ಕಡೆ ಪ್ರತಿಭಟನೆ ನಡೆಯುತ್ತಿದ್ದು, ಬಸ್ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಇದಲ್ಲದೇ, ಪ್ರತಿಭಟನೆಯಿಂದಾಗಿ ನಗರದಲ್ಲಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಒಟ್ಟಾರೆ ರಮೇಶ್ ಜಾರಕಿಹೊಳಿ ಬೆಂಬಲಿಗರ ವ್ಯಾಪಕ ಪ್ರತಿಭಟನೆಯಿಂದ ಗೋಕಾಕ್‌ನಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ.

Related