ಗದಗ 2 ಕೋವಿಡ್ ಪಾಸಿಟಿವ್ ಪ್ರಕರಣ ಧೃಡ

ಗದಗ 2 ಕೋವಿಡ್ ಪಾಸಿಟಿವ್ ಪ್ರಕರಣ ಧೃಡ

ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ 32 ವರ್ಷದ ಪುರುಷ ಪಿ-1566 ಹಾಗೂ 38 ವರ್ಷದ ಮಹಿಳೆಗೆ ಪಿ-1567ಗೆ ಕೋವಿಡ್-19 ಸೋಂಕು ಧೃಡಪಟ್ಟಿರುತ್ತದೆ. ಪಿ-1566 ವ್ಯಕ್ತಿಯು ಮಹಾರಾಷ್ಟ್ರದ ಮುಂಬಯಿಂದ ಇದೇ 19 ರಂದು ಒಬ್ಬರೇ ಜಿಲ್ಲೆಗೆ ಆಗಮಿಸಿದ್ದಾರೆ.

ಪಿ-1567 ಮಹಿಳೆಯ ಎರಡು ಕುಟುಂಬದ 17 ಜನ ಛತ್ತಿಸಗಡದಿಂದ ಜಿಲ್ಲೆಗೆ ಆಗಮಿಸಿದ್ದು ಇದರಲ್ಲಿ ಮಹಿಳೆಯ ಪ್ರಾಥಮಿಕ ಸಂಪರ್ಕದ 16 ಜನರ ಗಂಟಲು ದ್ರವದ ವರದಿಯೂ ನೆಗೆಟಿವ್ ಆಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಕೊವಿಡ್-19: ಗದಗ ಜಿಲ್ಲೆಯ ಸ್ಥಿತಿಗತಿ

ಗುರುವಾರ ಮೇ 21ರವರೆಗಿನ ಗದಗ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 4498(ಹೊಸದಾಗಿ 341 ಸೇರಿ).
28 ದಿನಗಳ ನಿಗಾ ಅವಧಿ ಪೂರೈಸಿದವರು 739 ಜನ. ಮನೆಯಲ್ಲಿಯೇ ಪ್ರತ್ಯೇಕ ನಿಗಾಹದಲ್ಲಿರುವವರ ಸಂಖ್ಯೆ: 3731
ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರ ಸಂಖ್ಯೆ : 27
ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿ:4676 (ಹೊಸದಾಗಿ 343 ಸೇರಿ)
ನಕಾರಾತ್ಮಕವಾಗಿವೆ (ನೆಗೇಟಿವ್) ಎಂದು ವರದಿಯಾದ ಸಂಖ್ಯೆ: 3585 (ಇಂದಿನ 11 ಸೇರಿ),
ಸೋಂಕು ಸಕಾರಾತ್ಮಕ ವರದಿ: 2
ಸರಿಯಾಗಿಲ್ಲದ,ತಿರಸ್ಕರಿಸಿದ ವರದಿಗಳು: 85
ವರದಿ ಬರಲು ಬಾಕಿ ಇರುವ ಸಂಖ್ಯೆ: 986(ಹೊಸದಾಗಿ 332 ಸೇರಿ)
ಒಟ್ಟು ಕೊವಿಡ್-19 ಪಾಸಿಟಿವ್ ಪ್ರಕರಣಗಳು: 20
ಜಿಲ್ಲೆಯಲ್ಲಿ ಪಿ-166 , ಪಿ-304, ಪಿ-370, ಪಿ-396, ಪಿ-514, ಪಿ-905, ಪಿ-912, ಪಿ-913, ಪಿ-970, ಪಿ-971, ಪಿ-972, ಪಿ-973, ಪಿ-1178, ಪಿ-1179, ಪಿ-1180, ಪಿ-1181, ಪಿ-1182, ಪಿ-1307, ಪಿ-1566, ಪಿ-1567 ಒಟ್ಟು 20 ಕೊವಿಡ್-19 ಸೋಂಕಿನ ಪ್ರಕರಣಗಳು ಧೃಢಪಟ್ಟಿವೆ.

ಈ ಪೈಕಿ ಪಿ-166 ಕಾರ್ಡಿಕ್ ಅರೆಸ್ಟನಿಂದ ಮೃತಪಟ್ಟಿದ್ದರು. ಪಿ-304, ಪಿ-370, ಪಿ-396, ಪಿ-514, ಪಿ-912 ವ್ಯಕ್ತಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 14 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related