Health Tips: ದಾಳಿಂಬೆ ಹಣ್ಣು ಆರೋಗ್ಯಕ್ಕೆ ಉತ್ತಮ, ಆದ್ರೆ ಎಚ್ಚರ

ಆರೋಗ್ಯದ ಬಗ್ಗೆ ಜನರು ಜಾಗೃತರಾಗ್ತಿದ್ದಾರೆ. ಕೊರೊನಾ ನಂತ್ರ ಹಣ್ಣು,ತರಕಾರಿ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಆಹಾರ ಯಾವುದೇ ಇರಲಿ, ಅದನ್ನು ಒಂದು ಪ್ರಮಾಣದಲ್ಲಿ ಸೇವನೆ ಮಾಡ್ಬೇಕು. ಯಾವುದು ಹೆಚ್ಚಾದ್ರೂ ದೇಹ ಸಹಿಸೋದಿಲ್ಲ.

ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇದು ಸಾರ್ವಕಾಲಿಕ ಸತ್ಯ. ಅನೇಕರು ಪ್ರತಿ ದಿನ ಹಣ್ಣುಗಳನ್ನು ತಿನ್ನಲು ಇಷ್ಟಪಡ್ತಾರೆ. ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಹಾಗೂ ದೇಹಕ್ಕೆ ಪೋಷಕಾಂಶಗಳನ್ನು ನೀಡಲು ಜನರು ಹಣ್ಣುಗಳನ್ನು ತಿನ್ನುತ್ತಾರೆ. ದಾಳಿಂಬೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿ ವೈರಲ್ ಮತ್ತು ಆಂಟಿ ಟ್ಯೂಮರ್ ಗುಣವಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಮತ್ತು ಫೋಲಿಕ್ ಆಮ್ಲವಿದೆ. ಪ್ರತಿನಿತ್ಯ ದಾಳಿಂಬೆಯನ್ನು ತಿನ್ನುವುದು ಅಥವಾ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ದಾಳಿಂಬೆ ಹಣ್ಣು ದೂರ ಮಾಡುತ್ತದೆ. ಹಾಗೆಯೇ ಗರ್ಭಿಣಿಯರಿಗೆ ದಾಳಿಂಬೆ ಹಣ್ಣು ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ದಾಳಿಂಬೆ ಹಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚಿರುವ ಕಾರಣ ಮಗುವಿನ ಆರೋಗ್ಯಕ್ಕೆ ಒಳ್ಳೆಯದು.. ಬೆಳಿಗ್ಗೆ ಉಪಹಾರದ ಜೊತೆ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಸೇವನೆ ಮಾಡುವವರಿದ್ದಾರೆ. ಆದ್ರೆ ಯಾವುದೂ ಅತಿಯಾಗಬಾರದು. ದಾಳಿಂಬೆಯನ್ನು ಅತಿಯಾಗಿ ಸೇವಿಸಿದರೆ, ಅದು ದೇಹಕ್ಕೆ ಸಾಕಷ್ಟು ಸಮಸ್ಯೆಯನ್ನುಂಟು ಮಾಡುತ್ತದೆ. ದಾಳಿಂಬೆಯನ್ನು ಹೆಚ್ಚು ತಿನ್ನುವುದರಿಂದ ಕೆಮ್ಮು, ಅಲರ್ಜಿ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ.

ಕಾಡಬಹುದು ಕೆಮ್ಮಿನ ಸಮಸ್ಯೆ : ದಾಳಿಂಬೆ ಹಣ್ಣನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ಮಾತ್ರ ಪ್ರಯೋಜನ ಹೆಚ್ಚು. ಆದರೆ ಹೆಚ್ಚು ದಾಳಿಂಬೆಯನ್ನು ಸೇವಿಸಿದ್ರೆ ಕೆಮ್ಮು ಶುರುವಾಗುವ ಸಾಧ್ಯತೆಯಿದೆ. ದಾಳಿಂಬೆ ಹಣ್ಣಿನಲ್ಲಿ ಕೆಲವು ಅಂಶಗಳಿದ್ದು, ಅದು ಗಂಟಲು ನೋವಿಗೆ ಕಾರಣವಾಗುತ್ತದೆ. ನೋಯುತ್ತಿರುವ ಗಂಟಲಿನ ಹೊರತಾಗಿ ನೀವು ನಿರಂತರವಾಗಿ ದಾಳಿಂಬೆಯನ್ನು ತಿನ್ನುತ್ತಿದ್ದರೆ, ಅದು ಕೆಮ್ಮಾಗಿ ನಿಮ್ಮನ್ನು ಕಾಡುತ್ತದೆ.

Related