ಇನ್ಮುಂದೆ ಬೆಂಗಳೂರಿನ ಸುತ್ತಮುತ್ತಲಿನಲ್ಲಿಯೂ ಮೆಟ್ರೋ ಸಂಚಾರ!

ಇನ್ಮುಂದೆ ಬೆಂಗಳೂರಿನ ಸುತ್ತಮುತ್ತಲಿನಲ್ಲಿಯೂ ಮೆಟ್ರೋ ಸಂಚಾರ!

ಬೆಂಗಳೂರು: ಇನ್ಮುಂದೆ ಬೆಂಗಳೂರಿನ ನಗರ ಮಾತ್ರವಲ್ಲದೆ ಬೆಂಗಳೂರಿನ ಸುತ್ತಮುತ್ತಲಿರುವ ನಗರಗಳಿಗೂ ನಮ್ಮ ಮೆಟ್ರೋ ಸಂಚಾರ ವಿಸ್ತರಿಸಲಿದೆ ಎಂದು ತಿಳಿದುಬಂದಿದೆ.

ಹೌದು, ಸಿಲಿಕಾನ್ ಸಿಟಿ ಬೆಂಗಳೂರು ಜನ ವಾಹನದಟ್ಟಣೆಯಿಂದ ತಮ್ಮ ಅರ್ಧ ಸಮಯವನ್ನು ವಿವಾಹನ ದಟ್ಟಣದಲ್ಲಿ ಕಳೆಯಬೇಕಾಗುತ್ತದೆ. ಆದರೆ ನಮ್ಮ ಮೆಟ್ರೋ ಸಂಚಾರ ಬೆಂಗಳೂರು ನಗರಕ್ಕೆ ಕಾಲಿಟ್ಟಿರುವುದರಿಂದ ಕೊಂಚ ಬೆಂಗಳೂರು ನಗರವಾಸಿಗಳು ತಮ್ಮ ಸಮಯವನ್ನು ಕಾಪಾಡಿಕೊಳ್ಳಬಹುದು.

ಯೆಸ್..‌ ಬೆಂಗಳೂರಿನ ನಮ್ಮ ಮೆಟ್ರೋ 4 ನೇ ಹಂತದ ಸಂಪರ್ಕ ಜಾಲಕ್ಕೆ 129 ಕಿಮೀ ಸೇರಿಸುವ ಕಾರ್ಯಸಾಧ್ಯತೆಯ ಅಧ್ಯಯನ ಇದೀಗ ಇನ್ನೊಮ್ಮೆ ಮುಂಚೂಣಿಗೆ ಬಂದಿದೆ. ಈ ಅಧ್ಯಯನದಲ್ಲಿ ಬೆಂಗಳೂರು ನಗರದಲ್ಲಿ ಇನ್ನೂ ಮೆಟ್ರೋ ಸಂಪರ್ಕ ದೊರೆಯದ ಭಾಗಗಳು ಮತ್ತು ಬೆಂಗಳೂರಿನ ಉಪನಗರಗಳಿಗೆ ಮೆಟ್ರೋ ಜಾಲ ವಿಸ್ತರಿಸುವ ಕುರಿತು ಪ್ರಸ್ತಾಪಿಸಲಾಗಿದೆ.

ಈಗಿರುವ ನೇರಳೆ ಮತ್ತು ಹಸಿರು ಮಾರ್ಗಗಳನ್ನು ಬಿಡದಿ (ಮೈಸೂರು ರಸ್ತೆ), ಹಾರೋಹಳ್ಳಿ (ಕನಕಪುರ ರಸ್ತೆ), ಅತ್ತಿಬೆಲೆ (ಹೊಸೂರು ರಸ್ತೆ) ಮತ್ತು ಕುಣಿಗಲ್ ಕ್ರಾಸ್‌ವರೆಗೆ (ತುಮಕೂರು ರಸ್ತೆ) ನಾಲ್ಕು ದಿಕ್ಕುಗಳಲ್ಲಿ ನಮ್ಮ ಮೆಟ್ರೋ ವಿಸ್ತರಿಸಲು ಪ್ರಸ್ತಾವನೆಯಲ್ಲಿ ನಮೂದಿಸಲಾಗಿದೆ.

ಬೆಂಗಳೂರು ನಗರದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿರುವ ಜಿಗಣಿ, ಆನೇಕಲ್, ಅತ್ತಿಬೆಲೆ, ಸರ್ಜಾಪುರ ಮತ್ತು ವರ್ತೂರು ಭಾಗಗಳನ್ನು ಸಂಪರ್ಕಿಸುವ ಹೊಸ ಮಾರ್ಗದ ಕುರಿತು BMRCL ಪ್ರಸ್ತಾವನೆ ಸಲ್ಲಿಸಿದೆ.

 

Related