ಮಹಿಳೆಯರಿಗೆ ಉಚಿತ ಪ್ರಯಾಣ, ಖಾಸಗಿ‌ ಬಸ್ ಮಾಲೀಕರರು ತತ್ತರ

ಮಹಿಳೆಯರಿಗೆ ಉಚಿತ ಪ್ರಯಾಣ, ಖಾಸಗಿ‌ ಬಸ್ ಮಾಲೀಕರರು ತತ್ತರ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಎಲ್ಲಾ ಮಹಿಳೆಯರಿಗೂ ನೆನ್ನೆಯಿಂದ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ. ಉಚಿತ ಪ್ರಯಾಣದಿಂದಾಗಿ ರಾಜ್ಯದ ಎಲ್ಲಾ ಮಹಿಳೆಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇದರ ಜೊತೆಗೆ ಖಾಸಗಿ ಬಸ್ ನ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹೌದು, ಮಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ನಿನ್ನೆಯಿಂದ ಉಚಿತ ಬಸ್ ಪ್ರಯಾಣದ ಯೋಜನೆ ಜಾರಿಗೊಳಿಸಿದ್ದು ರಾಜ್ಯದ ಮಹಿಳೆಯರಿಗೆಲ್ಲ ಸಂತಸ ತಂದಿದೆ. ನಮಗೆ ಲಭ್ಯವಾಗುತ್ತಿರುವ ವರದಿಗಳ ಪ್ರಕಾರ ಕೆಲ ಮಹಿಳೆಯರು ಯಾವ ಕೆಲಸವಿರದಿದ್ದರರೂ, ಉಚಿತ ಬಸ್ ಪಯಣದ ಖುಷಿ ಅನುಭವಿಸಲು ಬಸ್ ಹತ್ತುತ್ತಿದ್ದಾರೆ. ಆದರೆ, ಮತ್ತೊಂದೆಡೆ ಸರ್ಕಾರದ ಸ್ಕೀಮ್ ನಿಂದಾಗಿ ಖಾಸಗಿ ಬಸ್ ಮಾಲೀಕರು ಗೋಳಾಡುತ್ತಿದ್ದಾರೆ. ಖಾಸಗಿ ಬಸ್ಸಿನ ನಿರ್ವಾಹಕ-ಮಾಲೀಕರು  ಹೇಳುವ ಪ್ರಕಾರ ಸೋಮವಾರದಂದು ಅವರ ಬಸ್ಸಲ್ಲಿ ಕನಿಷ್ಟ 40 ಮಹಿಳೆಯರು ಇರುತ್ತಿದ್ದರಂತೆ ಆದರೆ ಇವತ್ತು ಯಾರೋಬ್ಬ ಮಹಿಳೆ ಕೂಡ ನಮ್ಮ ಬಸ್ ನಲ್ಲಿ ಇಲ್ಲ. ಇದರಿಂದ ನಮಗೆ ಬಹಳ ತೊಂದರೆಯಾಗುತ್ತಿದೆ ಆದ್ದರಿಂದ ಸರ್ಕಾರವು ಖಾಸಗಿ ಬಸ್ ಮಾಲೀಕರ ಬಗ್ಗೆಯೂ ಚಿಂತಿಸಬೇಕಿತೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

 

Related