ಉಚಿತ ಬಸ್ ಪ್ರಯಾಣ: ನಕಲು ಪ್ರತಿ ತೋರಿಸಿಯೂ ಪ್ರಯಾಣ

ಉಚಿತ ಬಸ್ ಪ್ರಯಾಣ: ನಕಲು ಪ್ರತಿ ತೋರಿಸಿಯೂ ಪ್ರಯಾಣ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ನೀಡಿದ್ದು, ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಈಗಾಗಲೇ ಜಾರಿ ಮಾಡಲಾಗಿದ್ದು ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಿದ.

ಮಹಿಳೆಯರಿಗೆ ಆಧಾರ್ ಕಾರ್ಡ್ ಅಥವಾ ಭಾವಚಿತ್ರ ಇರುವಂತಹ ಗುರಿತಿನ ಚೀಟಿಯನ್ನು ತೋರಿಸಿ ರಾಜ್ಯದಲ್ಲಿ ಪ್ರಯಾಣ ಮಾಡಬಹುದು ಎಂದು ತಿಳಿಸಿದೆ.

ಹೌದು, ರಾಜ್ಯದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಒದಗಿಸುವ “ಶಕ್ತಿ” ಯೋಜನೆ ಜಾರಿಯಾದ ಬೆನ್ನಲ್ಲೇ ಗುರುತಿನ ಚೀಟಿ ಕುರಿತು ಉಂಟಾದ ಗೊಂದಲವನ್ನೂ ಸರಕಾರ ಪರಿಹರಿಸಿದೆ. ಮಹಿಳಾ ಪ್ರಯಾಣಿಕರು ತಮ್ಮ ಭಾವಚಿತ್ರ ಇರುವ ಗುರುತಿನ ಚೀಟಿಯ ನಕಲು ಪ್ರತಿಯನ್ನೂ ತೋರಿಸಿ ಪ್ರಯಾಣಿಸಲು ಕೆಎಸ್ಸಾರ್ಟಿಸಿ ಅವಕಾಶ ಕಲ್ಪಿಸಿದೆ.

ಮಹಿಳಾ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಮೂಲ ಗುರುತಿನಚೀಟಿ ಅಥವಾ ಡಿಜಿಲಾಕರ್‌ ಮೂಲಕ ಐಡಿಯನ್ನು ಹಾಜರುಪಡಿಸುತ್ತಿದ್ದಾರೆ. ಈಗ ಗುರುತಿನ ಚೀಟಿಯ ನಕಲು ಪ್ರತಿಯನ್ನೂ (ಹಾರ್ಡ್‌ / ಸಾಫ್ಟ್ ಕಾಪಿ) ತೋರಿಸಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದು ನಿಗಮದ ಪ್ರಕಟನೆ ತಿಳಿಸಿದೆ.

Related