ಮಹಿಳೆಯರಿಗೆ ಐತಿಹಾಸಿಕ ಸ್ಥಳಗಳಿಗೆ ಉಚಿತ ಪ್ರವೇಶ

  • In State
  • March 7, 2020
  • 217 Views
ಮಹಿಳೆಯರಿಗೆ ಐತಿಹಾಸಿಕ ಸ್ಥಳಗಳಿಗೆ ಉಚಿತ ಪ್ರವೇಶ

ನವದೆಹಲಿ, ಮಾ. 07: ನಮ್ಮಲ್ಲಿ ಹೆಣ‍್ಣಿಗೆ ಎಲ್ಲಿಲ್ಲದ ಗೌರವ. ಹೆಣ್ಣು, ಹೆಣ್ಣು ಎನ್ನುವ ಪದವೇ ಒಂದು ಮಾಯೆ ಎಂದು ಕೆಲವರು ಹೇಳುತ್ತಾರೆ. ಈ ಹೆಣ್ಣು ನಮ್ಮ ಜೊತೆ ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಪ್ರೀತಿಯ ಹೆಂಡತಿಗೆ, ಸ್ನೇಹಿತೆಯಾಗಿ, ನಮ್ಮ ಜೊತೆಯಲ್ಲಿ ಇರುತ್ತಾಳೆ. ಆದರೆ ಕೆಲವರು ಹೆಣ್ಣಿಗೆ ಗೌರವ ನೀಡುವುದಿಲ್ಲ. ಎಲ್ಲರೂ ಹೆಣ‍್ಣಿಗೆ ಗೌರವಿಸೋಣ.

ಹೌದು, ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ದೇಶದ ಪ್ರಾಚ್ಯವಸ್ತು ಸಂಶೋಧನಾ ಸಂಸ್ಥೆ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದಡಿ ಬರುವ ಎಲ್ಲ ಐತಿಹಾಸಿಕ ಸ್ಥಳಗಳಲ್ಲಿಯೂ ನಾಳೆ ಮಹಿಳೆಯರಿಗೆ ಉಚಿತ ಪ್ರವೇಶ ಇರಲಿದೆ ಎಂದು ಕೇಂದ್ರ ಸಾಂಸ್ಕೃತಿಕ ಸಚಿವಾಲಯ ತಿಳಿಸಿದೆ.

ಇನ್ನು ಪ್ರತಿ ವರ್ಷ ಫೆಬ್ರವರಿ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ, ಸುಮಾರು 13.5 ಫಾಲೋವರ್ಸ್ ಹೊಂದಿರುವ ತಮ್ಮ ಸಾಮಾಜಿಕ ಜಾಲತಾಣವನ್ನು ಮಹಿಳೆಯರ ಬಳಕೆಗೆ ನಾಳೆ ನೀಡುವುದಾಗಿ ಕೂಡ ತಿಳಿಸಿದ್ದಾರೆ.

 

Related