ಅಧಿಕಾರಿ ಹೆಸರಿನಲ್ಲಿ ಫೇಸ್‌ಬುಕ್ ನಿಂದ ವಂಚನೆ!

ಅಧಿಕಾರಿ ಹೆಸರಿನಲ್ಲಿ ಫೇಸ್‌ಬುಕ್ ನಿಂದ ವಂಚನೆ!

ಕಾರವಾರ : ನಗರದಲ್ಲಿರುವ ಗ್ರಾಮೀಣ ಠಾಣೆಯ ಪಿಎಸ್‌ಐ ರೇವಣ್ಣ ಜೀರನಕಳಗಿ ಹೆಸರಿನಲ್ಲಿ ಅವರ ಸುಮಾರು 20ಕ್ಕೂ ಅಧಿಕ ಸ್ನೇಹಿತರಿಗೆ ಕುಶಲೋಪರಿಯ ಸಂದೇಶಗಳನ್ನು ಫೇಸ್‌ಬುಕ್ ಮೆಸೆಂಜರ್ ಮೂಲಕ ಕಳುಹಿಸಲಾಗಿದೆ.

ಚಾಲಾಕಿ ಚೋರರು ಹಣ ಮಾಡುವುದಕ್ಕೆ ಹೊಸ ಮಾರ್ಗವೊಂದನ್ನ ಹುಡುಕಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ನಿಮ್ಮದೇ ಸ್ನೇಹಿತರಂತೆ ಪರಿಚಯಸ್ಥರ ಹೆಸರಿನಲ್ಲಿ ಕಾಸು ಪೀಕಲು ಮುಂದಾಗಿರುವ ಘಟನೆಯೊಂದು ಉತ್ತರಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಪರಿಚಯಸ್ಥರು ಆತ್ಮೀಯವಾಗಿ ಮಾತುಕತೆ ಪ್ರಾರಂಭಿಸಿದ್ದು, ಬಳಿಕ ರೇವಣ್ಣ ಹೆಸರಿನಲ್ಲಿ ಸಂದೇಶ ಮಾಡಿದ್ದ ವ್ಯಕ್ತಿ ತನಗೆ ತುರ್ತು ಹಣದ ಅವಶ್ಯಕತೆ ಇದ್ದು ತನ್ನ ಫೋನ್‌ಪೇ ಅಥವಾ ಗೂಗಲ್ ಫೇ ಖಾತೆಗೆ 10 ಸಾವಿರ ಹಣ ಹಾಕುವಂತೆ ಕೇಳಿಕೊಂಡಿದ್ದಾನೆ.

ಈ ವೇಳೆ ಯಾವ ಉದ್ದೇಶಕ್ಕೆ ಹಣ ಬೇಕು, ಏನಾಗಿದೆ ಎಂದು ಪ್ರಶ್ನೆ ಮಾಡಿದಾಗ ಸಮರ್ಪಕ ಉತ್ತರ ಬಂದಿಲ್ಲವಾಗಿದೆ. ಇದರಿಂದ ಅನುಮಾನಗೊಂಡವರು ನೇರವಾಗಿ ಪಿಎಸ್‌ಐಗೆ ಕರೆ ಮಾಡಿ ವಿಷಯವನ್ನ ಕೇಳಿದಾಗ ಅಸಲಿಗೆ ಮೆಸೇಜ್ ಬಂದಿರುವುದು ನಕಲಿ ಖಾತೆಯಿಂದ ಎನ್ನುವುದು ತಿಳಿದು ಶಾಕ್ ಆಗಿದೆ.

Related