ವೃದ್ಧೆಗೆ ಫೇಸ್‌ಬುಕ್ ಫ್ರೆಂಡ್‌ನಿಂದ ವಂಚನೆ

ವೃದ್ಧೆಗೆ ಫೇಸ್‌ಬುಕ್ ಫ್ರೆಂಡ್‌ನಿಂದ ವಂಚನೆ

ಧಾರವಾಡ : ಫಾರಿನ್ ಹಣಕ್ಕೆ ಆಸೆ ಬಿದ್ದ ವೃದ್ಧೆಗೆ ಫೇಸ್‌ಬುಕ್‌ನಲ್ಲಿ ಅಪರಿಚಿತರೊಂದಿಗೆ ಸಂಪರ್ಕದಲ್ಲಿದ್ದಿರಾ ? ಹೊಸ ದಂಧೆಗೆ ಇಳಿದಿರೊ ಆನ್‌ಲೈನ್ ಚೋರರು ಫಾರಿನ್ ಹಣ ಹಾಗೂ ದುಬಾರಿ ಗಿಫ್ಟ್ ಆಸೆ ತೋರಿಸಿ ನಾಮ ಹಾಕ್ತಾರೆ.

ಹುಬ್ಬಳ್ಳಿಯ ಫಿಲೋಮಿನಾ ಆಂಟುನಿಯೊ ಎಂಬ 72 ವರ್ಷ ವಯಸ್ಸಿನ ವೃದ್ಧೆಗೆ ಫೇಸ್‌ಬುಕ್‌ನಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬನಿಂದ ವಂಚನೆಯಾಗಿದೆ. ಕೇಶ್ವಾಪುರ ನಗರದ ಬೆಳವನಿಕೆ ಕಾಲೋನಿ ನಿವಾಸಿಯಾದ ಫಿಲೋಮಿನಾ ಅವರಿಗೆ ಮೈಕಲ್ ಎಂಬಾತ ಫಾರಿನ್ ಹಣ ಹಾಗೂ ಉಡುಗೊರೆ ಕಳಿಸೋದಾಗಿ ಹೇಳಿ 2,48,789 ರೂ. ಹಣ ಪಡೆದು ಮೋಸ ಮಾಡಿದ್ದಾನೆ ಎನ್ನಲಾಗಿದೆ.

ಲಂಡನ್‌ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡೋದಾಗಿ ಹೇಳಿರೋ ಮೈಕಲ್, ತನ್ನನ್ನು ಕೇವಿನ್, ಜೇಮ್ಸ್ ಹಾಗೂ ಅಲೆಕ್ಸ್ ಬೇನ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡಿದ್ದ. ತಾನು ಫಾರಿನ್ ಮನಿ ಟ್ರಾನ್ಸ್ಫರ್ ಡಿಪಾರ್ಟ್ಮೆಂಟ್ ಅಧಿಕಾರಿ ಅಂತ ಹೇಳಿ ವೃದ್ಧೆಗೆ ಫಾರಿನ್ ಹಣ ಹಾಗೂ ಉಡುಗೊರೆ ಇರೋ ಪಾರ್ಸಲ್ ಕಳಿಸೋದಾಗಿ ಹೇಳಿದ್ದ.

ಕೊನೆಗೆ ಯಾವುದೇ ಪಾರ್ಸಲ್ ಬರದೆ, ವಿದೇಶಿ ಹಣಕ್ಕೆ ಆಸೆ ಬಿದ್ದ ವೃದ್ಧೆ ತಮ್ಮ ಪಿಂಚಣಿ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಬAಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related