ಒಂದೇ ಕುಟುಂಬದ ನಾಲ್ವರು ಸಾವು!

ಒಂದೇ ಕುಟುಂಬದ ನಾಲ್ವರು ಸಾವು!

ರಾಣೇಬೆನ್ನೂರ : ಗದಗ ಹಾಗೂ ಹಾವೇರಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ 6 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೈಕ್‌ಗೆ ಮರಳು ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಸಿದ್ದಪ್ಪ ಹನುಮಪ್ಪ ನಾಗೇನಹಳ್ಳಿ(40), ಪತ್ನಿ ಅನುಸೂಯ(33) ಮಕ್ಕಳಾದ ವನಿತಾ(11) ವಿನೋದ(9) ಮೃತ ದುರ್ದೈವಿಗಳು. ಹಿರೇಕೆರೂರು ದುರ್ಗಮ್ಮ ದೇವಿ ಜಾತ್ರೆ ಮುಗಿಸಿ ಮರಳಿ ಊರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

Related