ಪ್ರೇಯಸಿಗೆ ಬೆಂಕಿಹಚ್ಚಿದ ಮಾಜಿ ಪ್ರೇಮಿ!

ಪ್ರೇಯಸಿಗೆ ಬೆಂಕಿಹಚ್ಚಿದ ಮಾಜಿ ಪ್ರೇಮಿ!

ಹೈದರಾಬಾದ್ : ಗಾರೆ ಕೆಲಸ ಮಾಡುತ್ತಿದ್ದ ಪ್ರೇಮಿಯೊಬ್ಬ ತನ್ನ ಮಾಜಿ ಪ್ರೇಯಸಿಯನ್ನು ಬೆಂಕಿ ಹಚ್ಚಿ ಸುಟ್ಟುಹಾಕಿರುವ ಭಯಾನಕ ಘಟನೆ ಆಂಧ್ರಪ್ರದೇಶದ ಧರ್ಮಾವರಂಬಲ್ಲಿ ನಡೆದಿದೆ.

ಆರೋಪಿಯನ್ನು ಗೂಟೈ ರಾಜೇಶ್ ಎಂದು ಗುರುತಿಸಲಾಗಿದ್ದು, ಕೊಲೆಯಾದ ಯುವತಿ ಸ್ನೇಹಲತಾ. ಪೊಲೀಸರ ಪ್ರಕಾರ ಇವರಿಬ್ಬರೂ ಪ್ರೀತಿಸುತ್ತಿದ್ದರು.
ಗಾರೆ ಕೆಲಸ ಮಾಡುತ್ತಿದ್ದ ಯುವಕನ ಪ್ರೀತಿಗೆ ಸ್ನೇಹಲತಾ ಬಿದ್ದಿದ್ದಳು. ಅದರೆ ಆಕೆಗೆ ಆಗಿನ್ನೂ ಕೆಲಸ ಸಿಕ್ಕಿರಲಿಲ್ಲ. ನಂತರ ಬ್ಯಾಂಕ್ ಒಂದರಲ್ಲಿ ಗುತ್ತಿಗೆ ಆಧಾರದ ಮೇಲೆ ಆಕೆಗೆ ಕೆಲಸ ಸಿಕ್ಕಿದೆ.

ಕೆಲಸ ಸಿಗುತ್ತಿದ್ದಂತೆಯೇ ಸ್ನೇಹಲತಾ ತನ್ನ ವರಸೆ ಬದಲಿಸಲು ಶುರು ಮಾಡಿದ್ದಳು ಆಕೆ ಮತ್ತೊಬ್ಬ ಯುವಕನ ಜತೆ ಸಂಬAಧ ಹೊಂದಿರುವುದಾಗಿ ರಾಜೇಶ್ ಸದಾ ಜಗಳ ತೆಗೆಯುತ್ತಿದ್ದನಂತೆ. ಮಾತ್ರವಲ್ಲದೇ, ಆಕೆ ತನ್ನನ್ನು ಅಸಡ್ಡೆ ಮಾಡಲು ಶುರು ಮಾಡಿದಳು. ನನ್ನ ಕಣ್ಣೆದುರಿಗೇ ಬೇರೊಬ್ಬ ಯುವಕನ ಜತೆ ಸುತ್ತಾಡಲು ತೊಡಗಿದಳು.

ಇನ್ನೊಬ್ಬನ ಜತೆ ಸುತ್ತಾಡುವ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿದೆ. ನಂತರ ರಾಜೇಶ್ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಸದ್ಯ ತಾನು ಕೊಲೆ ಮಾಡಿರುವ ವಿಷಯವನ್ನು ರಾಜೇಶ್ ಒಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ.

Related