ಶಕ್ತಿ ಯೋಜನೆಗೆ: ಒಂದು ವಾರಕ್ಕೆ 70 ಕೋಟಿ ವೆಚ್ಚ: ಖರ್ಗೆ

ಶಕ್ತಿ ಯೋಜನೆಗೆ: ಒಂದು ವಾರಕ್ಕೆ 70 ಕೋಟಿ ವೆಚ್ಚ: ಖರ್ಗೆ

ಬೆಂಗಳೂರು: ರಾಜ್ಯದ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣದ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಈಗಾಗಲೇ ಜಾರಿ ಮಾಡಿದ್ದು, ಒಂದು ವಾರಕ್ಕೆ ಸುಮಾರು ಸರಾಸರಿ 70 ಕೋಟಿ ರೂ ವೆಚ್ಚ ವಗಲಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಅವರು ಹೇಳಿದ್ದಾರೆ.

ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಸಾವಿರಾರು ಕೋಟಿ ರೂ. ವೆಚ್ಚವಾಗಲಿದ್ದು ಅದನ್ನು ಮುಂದುವರೆಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮಾತು ಕೊಟ್ಟಂತೆ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಸೇರಿದಂತೆ 4 ಸಾರಿಗೆ ಸಂಸ್ಥೆಗಳ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಒಂದು ವಾರದಲ್ಲಿ ಉಚಿತ ಪ್ರಯಾಣಕ್ಕೆ 70 ಕೋಟಿ ರೂ. ವೆಚ್ಚವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾವಿರಾರು ಕೋಟಿ ವೆಚ್ಚವಾಗುತ್ತದೆ ಎಂಬುದನ್ನು ಲೆಕ್ಕ ಹಾಕಿಯೇ ಜಾರಿಗೆ ತಂದಿದ್ದೇವೆ ಎಂದರು.

ಬಿಜೆಪಿಯವರು ದೇವಾಲಯಕ್ಕೆ ಹೋಗಿ ಎಂದರೂ ಯಾರೂ ಹೋಗುತ್ತಿರಲಿಲ್ಲ. ಶಕ್ತಿ ಯೋಜನೆ ಜಾರಿಗೆ ತಂದ ಬಳಿಕ ಎಲ್ಲರೂ ದೇವಾಲಯಕ್ಕೆ ಹೋಗುತ್ತಿದ್ದಾರೆ. ದೇವಸ್ಥಾನಕ್ಕೆ ಉಚಿತವಾಗಿ ಹೋಗುವುದು ಸರಿಯಲ್ಲ ಎಂದು ಪ್ರಯಾಣಿಸುವವರ ಬಾಯಲ್ಲಿ ಹೇಳಿಸಲಿ. ಬಿಜೆಪಿಯವರು ಇದನ್ನು ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು. ವಿದ್ಯುತ್ ದರ ಹೆಚ್ಚಳ ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದ್ದು, ಆಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿತ್ತು. ಬೆಲೆ ಏರಿಕೆಗೆ ಒಪ್ಪಿಗೆ ಕೊಟ್ಟಿದ್ದು ಹಿಂದಿನ ಸರ್ಕಾರದ ಅವಧಿಯಲ್ಲಿ. ಬಿಜೆಪಿಯವರಿಗೆ ಆಡಳಿತ ಗೊತ್ತಿಲ್ಲ. ಆಡಳಿತ ನಡೆಸಲು ಬಾರದವರು ಹೀಗೆ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.

 

Related