ನಗರಸಭೆ ಪೌರ ಕಾರ್ಮಿಕರಿಗೆ, ಮನೆ ನಿರ್ಮಾಣ

ನಗರಸಭೆ ಪೌರ ಕಾರ್ಮಿಕರಿಗೆ, ಮನೆ ನಿರ್ಮಾಣ

ರಾಯಚೂರು : ಬರುವ ಮೂರು ವರ್ಷದಲ್ಲಿ ಜಿಲ್ಲೆಯ ನಗರಸಭೆಯ ಪೌರ ಕಾರ್ಮಿಕರಿಗೆ ನಿವೇಶನ ಹಾಗು ಮನೆಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಡಾ. ಶಿವರಾಜ ಪಾಟೀಲ ಹೇಳಿದರು.

ರಾಯಚೂರಿನ ಅತ್ತನೂರ ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು, ಕೊರೋನಾದಂಥ ಸಂಕಷ್ಟ ಸಮಯದಲ್ಲಿ ವಾರಿಯರ್ಸ್ ಆಗಿ ಕೆಲಸ ಮಾಡಿದ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ ಕೊರೋನಾ ಬಂದಾಗ ತಂದೆ ತಾಯಿಗಳ ಬಳಿ ಹೋಗಲು ಜನರು ಹಿಂಜರಿಯುತ್ತಿರುವಾಗ ಪೌರಕಾರ್ಮಿಕರು ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಈ ಸಮಾರಂಭದಲ್ಲಿ ಮಾತನಾಡಿ, ರಾಯಚೂರು ಜಿಲ್ಲಾಧಿಕಾರಿ ಆರ್ ವೆಂಕಟೇಶ ಕುಮಾರ ಪೌರಕಾರ್ಮಿಕರ ಸಮಸ್ಯೆಗಳನ್ನು ಜಿಲ್ಲಾಮಟ್ಟದಲ್ಲಿ ಬೇಡಿಕೆಗಳನ್ನು ಚರ್ಚಿಸಿ ಈಡೇರಿಸಲಾಗಯವುದು, ಸರಕಾರದ ಮಟ್ಟದಲ್ಲಿದ್ದ ಪತ್ರ ಬರೆದು ಪರಿಹಾರಕ್ಕೆ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ 3500 ಚೆಕ್ ನೀಡಿ ಸನ್ಮಾನಿಸಲಾಯಿತು, ಕೊರೊನಾ ಸಂದರ್ಭದಲ್ಲಿ ಅನನ್ಯ ಸೇವೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.

Related