ಶವರ್ಮಾ ಪ್ರಿಯರೇ ಎಚ್ಚರಿಕೆ : ಶವರ್ಮಾ ತಿಂದು ಬಾಲಕಿ ಸಾವು

  • In Crime
  • May 9, 2022
  • 195 Views
ಶವರ್ಮಾ ಪ್ರಿಯರೇ  ಎಚ್ಚರಿಕೆ : ಶವರ್ಮಾ ತಿಂದು ಬಾಲಕಿ  ಸಾವು

ಶವರ್ಮಾ ತಿಂದು ಬಾಲಕಿ ಮೃತಪಟ್ಟ ಅಂಗಡಿಯಲ್ಲಿ ಶವರ್ಮಾ ಸೇವಿಸಿದ್ದ, ಇತರ 50 ವಿದ್ಯಾರ್ಥಿಗಳು ಕೂಡ ತೀವ್ರ ಅಸ್ವಸ್ಥರಾಗಿದ್ದರು. ಶವರ್ಮಾದಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಮತ್ತು ಇತರ ಮೂರು ಸೂಕ್ಷ್ಮಜೀವಿಗಳು ಕಲುಷಿತಗೊಂಡಿರುವುದನ್ನು ಕೋಝಿಕ್ಕೋಡ್ ಪ್ರಯೋಗಾಲ ಈಗಾಗಲೇ ದೃಢಪಡಿಸಿದೆ.
ಕೇರಳದ ಕಾಸರಗೋಡಿನಲ್ಲಿ ಇತ್ತೀಚೆಗಷ್ಟೇ ಒಂದು ದುರ್ದೈವದ ಘಟನೆ ನಡೆದು ಹೋಗಿ ಬಾಲಕಿ ಒಬ್ಬಳು ಜೀವ ತೆತ್ತ ಘಟನೆ ನಡೆದಿದೆ. ಆಹಾರ ವಿಷವಾಗಿದ್ದು, ಅದನ್ನು ಸೇವಿಸಿ 16 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ಕಾಸರಗೋಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಬಾಲಕಿಯ ಸಾವಿನ ಘಟನೆಗೆ ಶಿಗೆಲ್ಲ ಎಂಬ ಬ್ಯಾಕ್ಟೀರಿಯಾ ಕಾರಣ ಎಂದು ಹೇಳಲಾಗುತ್ತಿದೆ. ಕೇರಳದ ರೆಸ್ಟೊರೆಂಟ್ನಲ್ಲಿ ಶವರ್ಮಾ ತಿಂದ ಸುಮಾರು 58 ಮಂದಿ ಈ ಬ್ಯಾಕ್ಟೀರಿಯಾ ಕಾರಣದಿಂದ ಅಸ್ವಸ್ಥಗೊಂಡಿದ್ದರು. ಬಾಲಕಿಯೊಬ್ಬಳು ಬಾಕ್ಟಿರಿಯಾ ಕಾರಣದಿಂದ ಮೃತಪಟ್ಟಿದ್ದಾಳೆ. ಇದನ್ನು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇರಳದ ಕರಿವೇಲೂರಿನ ಪೇರಾಲ ನಿವಾಸಿ ಆಗಿರುವ 16 ವರ್ಷದ ದೇವಾನಂದ ಎಂಬ ಬಾಲಕಿ ಶವರ್ಮಾ ಸೇವಿಸಿದ್ದಳು.

ಮೇಯೊ ಕ್ಲಿನಿಕ್ ಹೇಳುವ ಪ್ರಕಾರ, ಶಿಗೆಲ್ಲ ಸೋಂಕು ಒಂದು ರೀತಿಯ ಬ್ಯಾಕ್ಟೀರಿಯಾ ಕುಟುಂಬದಿಂದ ಉಂಟಾಗುವ ಕರುಳಿನ ಸೋಂಕು ಆಗಿದೆ. ಇದನ್ನು ಶಿಗೆಲ್ಲ ಎಂದು ಕರೆಯಲಾಗುತ್ತದೆ. ಶಿಗೆಲ್ಲ ಸೋಂಕಿನ ಮುಖ್ಯ ಲಕ್ಷಣವೆಂದರೆ ರಕ್ತಸಿಕ್ತ ಅತಿಸಾರ ಆಗಿದೆ.

ಶಿಗೆಲ್ಲಾ ತುಂಬಾ ಸಾಂಕ್ರಾಮಿಕ ಕಾಯಿಲೆ ಆಗಿದೆ. ಈ ಅಪಾಯಕಾರಿ ಶಿಗೆಲ್ಲಾ ಬ್ಯಾಕ್ಟೀರಿಯಾ ಕಾರಣದಿಂದ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇಂತಹ ಸಮಯದಲ್ಲಿ ಶಿಗೆಲ್ಲ ಸೋಂಕಿತ ವ್ಯಕ್ತಿಯ ಮಲದೊಂದಿಗೆ ಸಂಪರ್ಕಕ್ಕೆ ಬಂದರೆ ಸೋಂಕು ತಗುಲುತ್ತದೆ.

Related