ಕೊರೋನಾ ವಾರಿಯರ್ಸ್ಗೆ ಆಹಾರ ಕಿಟ್ ವಿತರಣೆ

ಕೊರೋನಾ ವಾರಿಯರ್ಸ್ಗೆ ಆಹಾರ ಕಿಟ್ ವಿತರಣೆ

ಹಗರಿಬೊಮ್ಮನಹಳ್ಳಿ :ಕೊರೋನಾ ಸಾಂಕ್ರಾಮಿಕ ರೋಗದಿಂದ ಎಲ್ಲಾ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋರೋನಾ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಮಾಣಿಕ ಕೆಲಸ ಮಾಡುತ್ತಿವೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ರವರು ೭೮ ರ ಇಳಿ ವಯಸ್ಸಿನಲ್ಲೂ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಮಂತ್ರಿ ಮಂಡಲ ಅಧಿಕಾರಿ ವರ್ಗ ಸಮರೋಪಾದಿಯಲ್ಲಿ ಕೊರೋನಾದ ವಿರುದ್ದ ಸೈನಿಕರಂತೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹಗರಿಬೊಮ್ಮನಹಳ್ಳಿಯ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ನೇಮಿರಾಜ ನಾಯ್ಕ್ ತಿಳಿಸಿದರು.
ತಮ್ಮ ನಿವಾಸದ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ನೇಮಿರಾಜ ನಾಯ್ಕ್ ಕ್ಷೇತ್ರದಲ್ಲಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ದೇವಸ್ಥಾನದ ಅರ್ಚಕರಿಗೆ ಹಾಗೂ ಕೊರೋನಾದಿಂದ ಸಂಕಷ್ಟಕ್ಕೆ ಒಳಗಾದ ಪಾಸಿಟಿವ್‌ಗೆ ಒಳಗಾದ ಕುಟುಂಬವರ್ಗದವರಿಗೆ ನೆರವು ನೀಡುವ ನಿಟ್ಟಿನಲ್ಲಿ “ಶ್ರಮಿಕರಿಗೊಂದು ನಮನ” ಎಂಬ ಘೋಷ ವಾಕ್ಯದೊಂದಿಗೆ ಆಹಾರ ಕಿಟ್ ವಿತರಿಸಲಾಗುವುದು. ಪಕ್ಷದ ಎಲ್ಲಾ ಮುಖಂಡರ ಕಾರ್ಯಕರ್ತರ ಶ್ರಮದಿಂದ ಕ್ಷೇತ್ರದ ಮರಿಯಮ್ಮನಹಳ್ಳಿ, ಮರಬ್ಬಿಹಾಳು, ತಂಬ್ರಹಳ್ಳಿ ಭಾಗದಲ್ಲಿ ಪಟ್ಟಣ ಸೇರಿದಂತೆ ಹಿಗಾಗಲೇ ೨೦೦೦ ಆಹಾರ ಕಿಟ್ ವಿತರಿಸಿದ್ದು ಇಂದು ಹಳೇ ಊರಿನ ಸಮುದಾಯ ಭವನದಲ್ಲಿ ವಿವಿಧ ಹಳ್ಳಿಗಳಿಂದ ಬಂದ ೨೫೦ ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಕಿಟ್, ಮಾಸ್ಕ್, ಛತ್ರಿಗಳನ್ನು ವಿತರಿಸಲಾಗುವುದು ಎಂದ ಅವರು ಕ್ಷೇತ್ರದಾದ್ಯಂತ ೮೦೦೦ ಆಹಾರ ಕಿಟ್ ವಿತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

Related